ಆಟವಾಡುತ್ತಾ 5 ಸೆಂಟಿಮೀಟರ್ ಉದ್ದದ ಗಣೇಶನ ಮೂರ್ತಿ ನುಂಗಿದ 3 ವರ್ಷದ ಮಗು | ಪವಾಡ ನಡೆದು ಮಗು ಬದುಕುಳಿದಿದೆ !
ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ ಮೂರು ವರ್ಷದ ಮಗುವನ್ನು ಗಣೇಶನ ಮೂರ್ತಿ ನುಂಗಿ ಸಾವಿನಂಚಿಗೆ ತೆರಳಿ ಬದುಕಿಬಂದ ಘಟನೆ ನಡೆದಿದೆ.
ವಿನಾಯಕ ಬೆಂಗಳೂರಿನ ಮೂರು ವರ್ಷದ ಬಸವ ಎಂಬ ಹೆಸರಿನ ಮಗು ಗಣೇಶನ ವಿಗ್ರಹಗಳಿಗೆ ಆಟವಾಡುತ್ತಿತ್ತು. ಹಾಗೆ ಆಟವಾಡುತ್ತಿದ್ದ ಮಗುವಿಗೆ ಉಸಿರಾಡಲು ಕಷ್ಟವಾಗಿ ಅಳಲು ಆರಂಭಿಸಿದೆ.
ತಕ್ಷಣ ಎಚ್ಚೆತ್ತುಕೊಂಡ ಪೋಷಕರು ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಧಾವಿಸಿದ್ದಾರೆ. ಅಲ್ಲಿ ಮಗುವಿನ ಎಕ್ಸ್ ರೇ ಮಾಡಿದಾಗ ಎದೆಯಭಾಗದಲ್ಲಿ ಗಣೇಶನ ಮೂರ್ತಿ ಇರುವುದು ಗೋಚರಿಸಿದೆ. ಅದು ಸುಮಾರು 5 ಸೆಂಟಿಮೀಟರ್ ಉದ್ದವಿರುವ ಗಣೇಶನ ಮೂರ್ತಿಯನ್ನು ನುಂಗಿರುವುದಾಗಿ ಆಗ ತಿಳಿದು ಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರ ತಂಡವು ಮಗುವಿಗೆ ಅರಿವಳಿಕೆ ಮದ್ದು ನೀಡಿ ಮಗು ನಿದ್ದೆಗೆ ಜಾರುವ ಹಾಗೆ ಮಾಡಿದ್ದಾರೆ. ಆ ಮೂಲಕ ಅನ್ನ ನಾಳಕ್ಕೆ ಆಗಬಹುದಾದ ಸಂಭಾವ್ಯ ತೊಂದರೆಯನ್ನು ಕಮ್ಮಿ ಮಾಡಲು ಪ್ರಯತ್ನಿಸಿದ್ದಾರೆ.
ನಂತರ ಫ್ಲೆಕ್ಸಿಬಲ್ ಎಂಡೋಸ್ಕೋಪಿಕ್ ವಿಧಾನದ ಮೂಲಕ ಮಗುವಿನ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಗಣೇಶನ ಮೂರ್ತಿಯನ್ನು ಹೊರತೆಗೆಯಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿದ ಮಕ್ಕಳ ತಜ್ಞ ಶ್ರೀಕಾಂತ್ ಕೆ ಪಿ ಅವರು, ಮಗು ಯಾವುದೇ ತೊಂದರೆ ಇಲ್ಲದೆ ಅನ್ನ ನಾಳವು ಸಹ ಡ್ಯಾಮೇಜ್ ಆಗದೆ ಬದುಕಿ ಬಂದದ್ದು ದೊಡ್ಡ ಪವಾಡ ಎಂದಿದ್ದಾರೆ.
It’s 3cm.. not 5 cm!