ದಕ್ಷಿಣ ಕನ್ನಡಕ್ಕೆ ಮೆಡಿಕಲ್ ಕಾಲೇಜಿಗೆ ಕ್ಯಾಂಪಸ್ ಫ್ರಂಟ್ ಬೇಡಿಕೆ | ಜಲೀಲ್ ಮುಕ್ರಿ ಮತ್ತು ಇರ್ಷಾದ್ ಯು. ಟಿ ಜೊತೆ ಮಾತುಕತೆ
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳ ನಿರ್ಮಾಣದ ಅಗತ್ಯವಿರುವುದರಿಂದ, ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಸಾಮಾಜಿಕ ಕಾರ್ಯಕರ್ತರಾದ ಜಲೀಲ್ ಮುಕ್ರಿ ಮತ್ತು ಇರ್ಷಾದ್ ಯು. ಟಿ ಭೇಟಿ ನೀಡಿ ಮಾತುಕತೆ ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಭಾಗವಾಗಿ ನಡೆದ,ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ. ಕ ಜಿಲ್ಲಾ ಸಮಿತಿ ಹಮ್ಮಿಕೊಂಡ ಜನಾಂದೋಲನವಾದದಲ್ಲಿ ಬೆಂಬಲ ಕೋರಿ ಸಾಮಾಜಿಕ ಕಾರ್ಯಕರ್ತ ಮತ್ತು ಸಾಹಿತಿ ಜಲೀಲ್ ಮುಕ್ರಿ ಉಪ್ಪಿನಂಗಡಿ ಹಾಗೂ ಸಾಮಾಜಿಕ ಹೋರಾಟಗಾರ ಇರ್ಷಾದ್ ಯು. ಟಿ ಇವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ಇದರ ಏರಿಯಾಧ್ಯಕ್ಷ ಮಹಮ್ಮದ್ ರಿಜ್ವಾನ್ ಗೋಳಿತ್ತೊಟ್ಟು , ಏರಿಯಾ ಕಾರ್ಯದರ್ಶಿ ಮರ್ಝೂಕ್ ಕೋಲ್ಪೆ ಮತ್ತು ಆಶಿಕ್ ಕಡಬ ಉಪಸ್ಥಿತರಿದ್ದರು.