ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಹಸಿರಿನಿಂದ ಉಸಿರು – ವನಮಹೋತ್ಸವ ಕಾರ್ಯಕ್ರಮ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ,ಎನ್ ಸಿಸಿ,ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಜಂಟಿಯಾಗಿ ಹಸಿರಿನಿಂದ ಉಸಿರು – ವನಮಹೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ಸಲ್ಲಿ ಫಲನೀಡುವ ಗಿಡಗಳನ್ನು ನೆಡುವ ಮೂಲಕ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ದಯಮಾಡಿ ಎಲ್ಲರೂ ನಮ್ಮ ಕರ್ತವ್ಯ ಪಾಲನೆ ಮಾಡೋಣ. ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪದಾಧಿಕಾರಿಗಳು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಶ್ಲಾಘಿಸಿ ಪ್ರಶಂಸಿದರು. ಈ ಸಂದರ್ಭದಲ್ಲಿ ಎಲ್ಲಾ ಅಧ್ಯಾಪಕ ಅಧ್ಯಾಪಕೇತರ ಸಿಬ್ಬಂದಿವರ್ಗದವರಿಗೆ ಪರಿಸರ ಕಾಳಜಿ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಪ್ರತಿಜ್ಞಾ ಸ್ವೀಕಾರವನ್ನು ನೆರವೇರಿಸಿಕೊಟ್ಟರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಮತ್ತು ಗ್ರೀನ್ ಟಿಚರ್ ಫೋರಂನ ಸಂಯೋಜಕಿ ಕು.ಯಶೋದಾ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಸರ್ವರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಎನ್‍ಎಸ್ ಎಸ್ ಅಧಿಕಾರಿ ಕು. ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಶ್ರೀಮತಿ ಸಂಗೀತ ಪೂಜಾರಿ, ರೆಡ್‍ಕ್ರಾಸ್ ಘಟಕದ ಶ್ರೀಮುರಳಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಎನ್ ಎಸ್‍ಎಸ್‍ಎಸ್ ಅಧಿಕಾರಿ ಶ್ರೀ ಪ್ರೇಮನಾಥ ವಂದಿಸಿ, ರೋವರ್ಸ್ ಸ್ಕೌಟ್ ಲೀಡರ್ ಶ್ರೀ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: