ಒತ್ತಾಯಕ್ಕೆ ಮಣಿದು ಮದುವೆಯಾದ ಯುವತಿ ಹಳೇ ಲವರ್ ನೊಂದಿಗೆ ಪರಾರಿ| ವಿಷಯ ತಿಳಿಯುತ್ತಿದ್ದಂತೆ ಪ್ರೇಮಿಗಳನ್ನು ಮದುವೆ ಮಾಡಿಸಿದ ಕರುಣಾಮಯಿ ಭಾವಿ ಪತಿ

ಪ್ರೇಮಿಗಳಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿಲನ್ ಆಗಿ ಯುವತಿಗೆ ಬೇರೆ ಮದುವೆ ನಡೆಸಿದರು. ಆ ಬಳಿಕ 17 ದಿನ ಬಿಟ್ಟು ಯುವತಿಯ ಭಾವಿ ಪತಿ ಪ್ರಿಯತಮನ ಜೊತೆಗೆ ಕಳುಹಿಸಿ ಕೊಟ್ಟು ನೈಜ ಪ್ರೀತಿಯನ್ನು ಉಳಿಸಿದ,ಲವ್ & ಬ್ರೇಕ್ ಅಪ್ ಸಿನಿಮಾವನ್ನೂ ಮೀರಿಸುವಂತಹ ನೈಜ ಘಟನೆ ಇದಾಗಿದ್ದು ಜಾರ್ಖಂಡ್ ನಲ್ಲಿ ನಡೆದಿದೆ.

ಘಟನೆ ವಿವರ:ರಾಂಚಿಯ ಸುಖದೇವ್ ನಗರದ ಯುವತಿಯೊಬ್ಬಳಿಗೆ ಕುಟುಂಬದ ಸಮ್ಮುಖದಲ್ಲಿಯೇ ವ್ಯಕ್ತಿಯೊಬ್ಬನ ಜೊತೆ ವಿವಾಹ ನಡೆಸಲಾಗಿತ್ತು. ಆದರೆ ಮದುವೆಯಾದ 17 ದಿನಗಳ ಬಳಿಕ ಯುವತಿ ಗಂಡನ ಮನೆಬಿಟ್ಟು ಪ್ರೀತಿಸಿದಾತನ ಮನೆಗೆ ತೆರಳಿದ್ದು, ಗಂಡನ ಮನೆಯವರು ಗಾಬರಿಗೊಂದು ಆಕೆಯನ್ನು ಹುಡುಕಿದ್ದು, ನಂತರದಲ್ಲಿ ಹುಡುಗಿಯ ಮನೆಯ ಕಡೆಗೂ ವಿಷಯ ಮುಟ್ಟಿಸಿದ್ದಾರೆ.

ಆ ಕೂಡಲೇ ಹುಡುಗಿಯ ಮನೆಯವರಿಗೆ ಅನುಮಾನವೊಂದು ಮೂಡುತ್ತದೆ. ಅದೇನೆಂದರೆ, ಆಕೆ ಮದುವೆಗೆ ಮೊದಲು ಪ್ರೀತಿಸಿದತಾನೊಂದಿಗೇನಾದರೂ ಎಸ್ಕೇಪ್ ಆಗಿರಬಹುದೇನೇನೋ.ಕೂಡಲೇ ಹುಡುಗಿಯ ಮನೆಯವರು ಆಕೆ ಪ್ರೀತಿಸುತ್ತಿದ್ದ ಹುಡುಗನ ಮನೆಗೆ ವಿಚಾರಿಸಲು ಹೋದಾಗ ಆಕೆ ಅಲ್ಲಿಯೇ ಇರುವುದು ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸದ್ಯ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು,ಯುವತಿಯು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಇದನ್ನು ನಿರಾಕರಿಸಿದ ಕುಟುಂಬದವರು ಬೇರೆ ಹುಡುಗನನ್ನು ನೋಡಿ ವಿವಾಹ ಮಾಡಿದ್ದರು ಎಂಬ ವಿಷಯವೂ ಅಲ್ಲಿ ಬಯಲಾಯಿತು.ಮದುವೆಯ ನಂತರದಲ್ಲಿಯೂ ಆಕೆ ಪ್ರಿಯಕರನೊಂದಿಗೆ ಫೋನ್‍ನ ಸಂಪರ್ಕದಲ್ಲಿದ್ದಳು, ಇದೀಗ ಗಂಡನ ಮನೆಬಿಟ್ಟು ಹೋಗಿದ್ದಾಳೆ. ಆಕೆಯ ಮನಸ್ಸನ್ನು ಅರಿತ ಪತಿ ಹಾಗೂ ಕುಟುಂಬದವರು ಪ್ರಿಯಕರನೊಂದಿಗೆ ಜೀವಿಸಲು ಸಮ್ಮತಿ ಸೂಚಿಸಿದ್ದಾರೆ.

ಜುಲೈ 20 ರಂದು ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ಪೊಲೀಸ್ ಪ್ರಧಾನ ಕಚೇರಿಗೆ ಕರೆಸಲಾಗಿದ್ದು, ಇಬ್ಬರೂ ಸಹಿ ಮಾಡಿ ಜೊತೆಯಾಗಿರಲು ಒಪ್ಪಿಗೆಯನ್ನು ಸೂಚಿಸಿದ್ದು, ಪ್ರಿಯಕರನು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ನೀಡಿದ್ದರಿಂದ ಜೊತೆಗೆ ಕಳುಹಿಸಲಾಯಿತು.

ಯುವತಿಯರು ಪ್ರೀತಿಗೆ ಮನೆಯವರು ನಿರಾಕರಿಸಿದರೆ, ಪತಿಯಾದವನೇ ಮುಂದೆ ನಿಂತು ಪ್ರಿಯಕರನೊಂದಿಗೆ ಕಳುಹಿಸಿಕೊಡುವ ದೃಶ್ಯ ಲವ್ ಸಿನಿಮಾವನ್ನು ಮೀರಿಸುವಂತಿತ್ತು.

Leave a Reply

error: Content is protected !!
Scroll to Top
%d bloggers like this: