ವಾಟ್ಸಾಪ್ ಅತಿಯಾದ ಬಳಕೆಯಿಂದ ಡಾಟಾ ಬೇಗ ಖಾಲಿ ಆಗ್ತಿದೆಯಾ ? | ಹಾಗಿದ್ರೆ ಈ ಪೋಸ್ಟ್ ನೀವು ಓದಲೇ ಬೇಕು !

ಈಗ ಏನಿದ್ದರೂ ವಾಟ್ಸಪ್ ಯುಗ. ಬೆಳಗ್ಗೆ ಗುಡ್ ಮಾರ್ನಿಂಗ್ ಇಂದ ಶುರುವಾದದ್ದು ರಾತ್ರಿಯ ಗುಡ್ ನೈಟ್ ಮೆಸೇಜ್ ತನಕ ನಮ್ಮ ಜೊತೆ ನೇತು ಹಾಕಿಕೊಂಡಿರುತ್ತದೆ.

 

ಹೌದು, ವಾಟ್ಸಾಪ್ ವಿಶ್ವದಲ್ಲೇ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಕಾರಣದಿಂದಾಗಿ, ದೇಶ ಮತ್ತು ವಿದೇಶದ ಜನರು ಬೇಗ ನಮ್ಮ ಸಂಪರ್ಕಕ್ಕೆ ಸಿಗುತ್ತಿದ್ದಾರೆ. ವಿಶೇಷವಾಗಿ ತುಂಬಾ ಮಾತನಾಡುವ ಕಾರಣದಿಂದ ನಾವು ವಾಟ್ಸಾಪ್‌ನಿಂದ ಕರೆ ಅಥವಾ ವೀಡಿಯೊ ಕರೆ ಮಾಡುತ್ತೇವೆ. ಆದರೆ ವಾಟ್ಸಾಪ್‌ ವೀಡಿಯೊ ಕರೆ ಮಾಡಿದಾಗ ನಮ್ಮ ಮೊಬೈಲ್ ಡೇಟಾ ಜಾಸ್ತಿ ಖರ್ಚಾಗುತ್ತದೆ. ಬೇಗ ಡೇಟಾ ಕಾಲಿ ಆಗುವ ಸಮಸ್ಯೆಯಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಈ ತಂತ್ರಗಳನ್ನ ಉಪಯೋಗಿಸಿ. ಈ ಟ್ರಿಕ್ಸ್ ಗಳು ವಾಟ್ಸಾಪ್‌ ವೀಡಿಯೊ ಕರೆ ಮಾಡಿದಾಗ ಡೇಟಾ ಉಳಿಸಲು ತುಂಬಾ ಸಹಾಯವಾಗುತ್ತವೆ.

*ವಾಟ್ಸಾಪ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ :

ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಲು, ಮೊದಲು ವಾಟ್ಸಾಪ್‌(Whatsapp)ನ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಹೋದ ನಂತರ, ಡೇಟಾ ಮತ್ತು ಸ್ಟೋರೆಜ್ ಯೂಸ್ ಕ್ಲಿಕ್ ಮಾಡಿ. ಡೇಟಾ ಮತ್ತು ಸ್ಟೋರೆಜ್ ಯೂಸ್ ಮೇಲೆ ಕ್ಲಿಕ್ ಮಾಡಿದ ನಂತರ, ಕಾಲ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಲೊ ಡೇಟಾ ಬಳಕೆಯನ್ನು ಆನ್ ಮಾಡಿ.

*ಡೇಟಾವನ್ನು ಉಳಿಸಲು ಮತ್ತೊಂದು ಮಾರ್ಗ:

ವಾಟ್ಸಾಪ್‌ನಲ್ಲಿನ ಡೇಟಾವನ್ನು ಕಾಲಿಂಗ್ ಅಥವಾ ವೀಡಿಯೊ ಕಾಲಿಂಗ್(Video Calling)ಗೆ ಮಾತ್ರ ಯೂಸ್ ಆಗುವುದಿಲ್ಲ. ಬದಲಾಗಿ, ಫೋಟೋ, ವೀಡಿಯೊ ಮತ್ತು ಇತರ ಡಾಕ್ಯುಮೆಂಟ್ಸ್ ಗೆ ಸಹ ವಾಟ್ಸಾಪ್ ಡೇಟಾ ಬಳಕೆಯಾಗುತ್ತದೆ. ನಿಮ್ಮ ಡೇಟಾ ಉಳಿಸಬೇಕೆಂದರೆ, ಇದಕ್ಕಾಗಿ ನೀವು ಫೋನ್‌ನ ಸೆಟ್ಟಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಬದಲಾವಣೆಯ ನಂತರ, ಯಾವುದೇ ಬಳಕೆದಾರರು ಕಳುಹಿಸಿದ ಮೀಡಿಯಾ ಫೈಲ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ ಮತ್ತು ಸುರಕ್ಷಿತವಾಗಿರುವುದಿಲ್ಲ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಆ ಮೀಡಿಯಾ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

*ಡೇಟಾವನ್ನು ಉಳಿಸಲು ಈ ಹಂತಗಳನ್ನು ಅನುಸರಿಸಿ :

ಡೇಟಾವನ್ನು ಉಳಿಸಲು, ಮೊದಲು ವಾಟ್ಸಾಪ್ ಸೆಟ್ಟಿಂಗ್ ಗೆ ಹೋಗಿ. ಸೆಟ್ಟಿಂಗ್‌ನಲ್ಲಿ ಡೇಟಾ ಮತ್ತು ಸ್ಟೋರೆಜ್ ಯೂಸ್(Storage Use) ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ಮೀಡಿಯಾ ಆಟೋ ಡೌನ್‌ಲೋಡ್ ಅನ್ನು ಕಾಣುತ್ತೀರಿ. ಇದರಲ್ಲಿ, ಫೋಟೋ, ಆಡಿಯೊ, ವೀಡಿಯೊ ಮತ್ತು ಡಾಕ್ಯುಮೆಂಟ್‌ಗಳ ಆಯ್ಕೆಗಳನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು 3 ಆಯ್ಕೆಗಳನ್ನು ನೋಡುತ್ತೀರಿ. ಇದರಲ್ಲಿ ಮೊದಲನೆಯದು ನೆವರ್, ಎರಡನೆಯದು ವೈ-ಫೈ ಮತ್ತು ಮೂರನೆಯದು ವೈ-ಫೈ ಮತ್ತು ಸೆಲ್ಯುಲಾರ್.

ಡೇಟಾವನ್ನು ಉಳಿಸಲು, ನೀವು ನೆವರ್ ಕ್ಲಿಕ್ ಮಾಡಬೇಕು. ಇದರ ನಂತರ, ಮೀಡಿಯಾ ಫೈಲ್ ಅನ್ನು ತನ್ನಿಂದ ತಾನೇ ಡೌನ್‌ಲೋಡ್ ಆಗುವುದಿಲ್ಲ ಅಥವಾ ನಿಮ್ಮ ಫೋನ್‌ನಲ್ಲಿ ಸೇವ್ ಆಗುವುದಿಲ್ಲ. ಇದರ ನಂತರ ನೀವು ಡೇಟಾ ಮತ್ತು ಸ್ಟೋರೇಜ್ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುತ್ತದೆ.

Leave A Reply

Your email address will not be published.