ಜುಜುಬಿ 4 ಲಕ್ಷದ ಬೈಕ್ ಆಸೆಗೆ ಬೆಲೆ ಕಟ್ಟಲಾಗದ ಜೀವ ಬಿಟ್ಟನಾ ಮೂರ್ಖ ಹುಡುಗ | ಉಡುಪಿಯಲ್ಲೊಬ್ಬ ಕ್ರೀಡಾಪಟುವಿನ ದುರಂತ ಅಂತ್ಯ !

ಮುಲ್ಕಿ, ಜು 22 : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕಾಪಿಕಾಡ್ ಬಳಿ ಯುವ ಫೋಟೋಗ್ರಾಫರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮೃತ ಯುವಕನನ್ನು ರಾಹುಲ್ ಕಾಲಿನ್ ಫರ್ನಾಂಡಿಸ್ (26) ಎಂದು ಗುರುತಿಸಲಾಗಿದೆ. ಮೃತ ಯುವಕನು ಕಿನ್ನಿಗೋಳಿಯಲ್ಲಿ ಆರ್. ಸಿ. ಎಫ್ ಎಂಬ ಹೆಸರಿನ ಫೋಟೋ ಸ್ಟುಡಿಯೋ ನಡೆಸುತ್ತಿದ್ದು ಬುಧವಾರ ರಾತ್ರಿ ಅತ್ಮಹತ್ಯೆ ನಡೆದಿವೆ.

ತಂದೆ ಅಸೌಖ್ಯದಿಂದ ಇರುವ ಕಾರಣ ಮಗ ರಾಹುಲ್ ತನ್ನ ತಂದೆ ಜೊತೆ ಮಲಗುತ್ತಿದ್ದ. ತಾಯಿ ಮಧ್ಯರಾತ್ರಿ ನೀರು ಕುಡಿಯಲೆಂದು ಎರಡು ಗಂಟೆಗೆ ಬಂದು ಪರಿಶೀಲಿಸಿದಾಗ ಮಗ ನಾಪತ್ತೆಯಾಗಿದ್ದ. ಆಗ ಗಾಬರಿಯಾಗಿ ಅಕ್ಕ ಪಕ್ಕದ ಮನೆಗೆ ತಿಳಿಸಿ ಹುಡುಕಾಟ ನಡೆಸಿದಾಗ ಮನೆ ಹಿಂಬದಿಯಲ್ಲಿರುವ ಬಾವಿಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆದ್ರೆ ಮೃತ ಯುವಕ ರಾಹುಲ್ ಕೆಲ ದಿನದ ಹಿಂದೆ ನನಗೆ ನಾಲ್ಕು ಲಕ್ಷ ರೂ. ನ ವಿದೇಶಿ ಬೈಕ್ ಬೇಕು ಎಂದು ತಂದೆ ಜೊತೆ ಹಠಹಿಡಿದಿದ್ದನಂತೆ. ಆತ್ಮಹತ್ಯೆ ಮಾಡುವುದಕ್ಕೆ ಮುನ್ನ ತನ್ನ ಹಾಗೂ ವಾಟ್ಸಪ್ ಡಿಲೀಟ್ ಮಾಡಿದ್ದ. ನಂತರ ಬಾವಿಗೆ ಬಿದ್ದಿದ್ದ.
ಮೃತ ಯುವಕ ರಾಹುಲ್ ಕಿನ್ನಿಗೋಳಿ ಚರ್ಚ್ ನ ಐಸಿವೈಎಂ ಘಟಕದ ಅಧ್ಯಕ್ಷನಾಗಿದ್ದು, ಉತ್ತಮ ಕ್ರೀಡಾಪಟು. ಆದರೆ ನಿಜಜೀವನದಲ್ಲಿ ಕ್ರೀಡಾಸ್ಫೂರ್ತಿಯಿಂದ ಆಡಲು ಈ ಹುಡುಗ ವಿಫಲನಾಗಿದ್ದಾನೆ. ಜುಜುಬಿ 4 ಲಕ್ಷದ ಬೈಕ್ ಆಸೆಗೆ ಬೆಲೆ ಕಟ್ಟಲಾಗದ ಜೀವ ಬಿಟ್ಟ ಮೂರ್ಖ ಹುಡುಗ ಎಂದು ಜನ ಮಾತಾಡ್ತಿದ್ದಾರ್ರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.