ಮಗುವಿನ ಹುಟ್ಟುಹಬ್ಬದ ದಿನವನ್ನೂ ಲೆಕ್ಕಿಸದೇ ಕೊಂದರಾ ಸುಪಾರಿ ಕಿಲ್ಲರ್ಸ್| ವಿಶಾಲ ಗಾಣಿಗ ಕೊಲೆ ಪ್ರಕರಣ ಗಿರಕಿ ಹೊಡೆಯುತ್ತಿದೆ ಪತಿಯ ಸುತ್ತ
ಆತ ದುಬೈ ನಲ್ಲಿದ್ದುಕೊಂಡೇ ಉಡುಪಿ, ಮಣಿಪಾಲ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಭೂಮಿ ಖರೀದಿಸಿ ಮಾರಾಟ ನಡೆಸುತ್ತಿದ್ದೂ, ಇದೆಲ್ಲಾ ವಹಿವಾಟನ್ನು ಆತನ ಪತ್ನಿ ನೋಡಿಕೊಳ್ಳುತ್ತಿದ್ದೂ,ಮೊಬೈಲ್ ವಾಟ್ಸಪ್ ಮೂಲಕ ಅವರಿಬ್ಬರೂ ದಿನದ ವಹಿವಾಟುಗಳ ಲೆಕ್ಕಾಚಾರ ನಡೆಸುತ್ತಿದ್ದರು.ಆತನ ಹೆಸರಿನಲ್ಲಿದ್ದ ಸುಮಾರು ಜಾಗ ಸಹಿತ ಇತರ ಜಾಗದ ಮಾರಾಟದ ವಿಚಾರವನ್ನು ಆತನ ಪತ್ನಿ ಪ್ರತಿದಿನದ ಲೆಕ್ಕ ಕೇವಲ ಮೊಬೈಲ್ನಲ್ಲಿ ತಿಳಿಸುತ್ತಿದ್ದಳು. ಆದರೆ ಆ ವಿಚಾರವೇ ಈಗ ಆತನ ಮೇಲೆ ಅನುಮಾನ ಬರಲು ಕಾರಣವಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆ ನಡೆಸಿ ತಪ್ಪಿತಸ್ಥ ಎಂದಾದರೆ ಆತನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಹೌದು ಇದೆಲ್ಲಾ ವಿಚಾರಗಳು ನಡೆಯುತ್ತಿರುವುದು ಮೊನ್ನೆ ತಾನೇ ಉಡುಪಿ ಬ್ರಹ್ಮಾವರ ಸಮೀಪದ ಕುಮ್ರಗೋಡಿನ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ. ತನ್ನ ಮಗುವಿನ ಹುಟ್ಟುಹಬ್ಬದ ದಿನದಂದೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಆಕೆಯ ಪತಿ ರಾಮಕೃಷ್ಣ ಗಾಣಿಗನೇ ಸುಪಾರಿ ಕೊಟ್ಟು ಕೊಲೆ ನಡೆಸಿರುವ ಸಾಧ್ಯತೆ ಹೆಚ್ಚಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ, ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ.
ಗಂಡನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ಈಕೆ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿದ್ದಳು. ತಂದೆ ಹಾಗೂ ಮಗಳ ಜೊತೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗಿದ್ದು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಬ್ರಹ್ಮಾವರಕ್ಕೆ ವಾಪಸಾಗಿದ್ದು, ಕೆಲಸ ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ತಿಳಿಸಿ ರಿಕ್ಷಾ ಏರಿದ್ದಾಳೆ.
ಆದರೆ, ಸಂಜೆಯಾದರೂ ಮಗಳು ಮನೆಗೆ ಬಾರದ ಕಾರಣ ಹಾಗೂ ಪೋನ್ ಕೂಡ ರಿಸೀವ್ ಮಾಡದಿರುವುದರಿಂದ ಭಯಗೊಂಡು ತನ್ನ ಇನ್ನೋರ್ವ ಮಗಳೊಂದಿಗೆ ವಿಶಾಲ ಅವರನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಗಳು ಅಪಾರ್ಟೈಂಟ್ ನ ರೂಮ್ ನಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ವಿಶಾಲ ಅವರು ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಚಿನ್ನಾಭರಣಕ್ಕಾಗಿ ಕೊಲೆ ನಡೆದಿದೆ ಎಂದು ಅನುಮಾನಿಸಲಾಗಿತ್ತು.
ತನಿಖೆಯ ಮೂಲಗಳ ಪ್ರಕಾರ ವಿಶಾಲ ಗಾಣಿಗ ಅವರ ಪತಿಯೇ ಉತ್ತರ ಪ್ರದೇಶ ಹಾಗೂ ಬೆಂಗಳೂರು ಮೂಲದ ಸುಪಾರಿ ಕಿಲ್ಲರ್ಸ್ ಗಳನ್ನು ಕರೆಸಿ ಆಕೆಯ ಹತ್ಯೆಗೆ ದುಬೈ ನಲ್ಲಿದ್ದುಕೊಂಡೇ ಸಂಚು ರೂಪಿಸಿದ್ದ ಎನ್ನಾಗಿದೆ.
ಈ ವರೆಗೂ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ,ಅವರಿಬ್ಬರ ನಡುವಿನ ಚಾಟ್ ಹಿಸ್ಟ್ರಿ ಈಗ ತನಿಖೆಯ ಮೂಲವಾಗಿದ್ದು ಸಣ್ಣ ಸುಳಿವು ಸಿಕ್ಕರೂ ಆರೋಪಿಗಳ ಬಂಧನ ಖಚಿತವಾಗಿದೆ.