ರಾಜ್ಯದಲ್ಲಿ ಮತ್ತಷ್ಟು ಅನ್ ಲಾಕ್ | ಹೊಸ ಮಾರ್ಗಸೂಚಿ ಬಿಡುಗಡೆ !
ಬೆಂಗಳೂರು: ರಾಜ್ಯದಲ್ಲಿ ಆನ್ ಲಾಕ್ 4.0 ಜಾರಿಗೆ ಮಾರ್ಗಸೂಚಿ ಆದೇಶ ಹೊರಬಂದಿದ್ದು ನಾಳೆಯಿಂದಲೇ ಹೊಸ ಆನ್ ಲಾಕ್ ರೂಲ್ ಜಾರಿಗೆ ಬರಲಿದೆ.
ಅಧಿಕೃತ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಅವಧಿಯಲ್ಲಿ ಒಂದು ಗಂಟೆ ಸಡಿಲಗೊಳಿಸಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿಧಿಸಿ ಆದೇಶಿಸಿದ್ದಾರೆ. ಆದುದರಿಂದ ಜನರ ವ್ಯವಹಾರದ ಅವಧಿಯು ಒಂದು ಗಂಟೆ ನಾಳೆಯಿಂದ ಹೆಚ್ಚಾಗಲಿದೆ.
ನಾಳೆಯಿಂದ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳು ಪ್ರೇಕ್ಷಕರಿಗೆ ತೆರೆಯಲಿದೆ.
ಆಡಿಟೋರಿಯಂ ಗಳು, ಮಲ್ಟಿಪ್ಲೆಕ್ಸುಗಳು ಮತ್ತು ಸಿನಿಮಾ ಥಿಯೇಟರ್ ಗಳು ನಾಳೆಯಿಂದ ಓಪನ್ ಆಗಲಿದ್ದು ಸಿನಿ ಮನರಂಜನೆ ಜನರಿಗೆ ದೊರೆಯಲಿದೆ. ಥಿಯೇಟರ್ಗಳಲ್ಲಿ ಶೇ. 50 ರಷ್ಟು ಸೀಟುಗಳ ಭರ್ತಿಯೊಂದಿಗೆ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ.
ಅಲ್ಲದೆ ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ.
ಪದವಿ ತರಗತಿಗಳನ್ನು ಜುಲೈ 26 ರಿಂದ ಪ್ರಾರಂಭಿಸಲು ಆದೇಶಿಸಿದ್ದು ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದ ಶಿಕ್ಷಕರು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೊದಲ ಲಸಿಕೆ ಪಡೆಯದ ಯಾರಿಗೂ ಕಾಲೇಜು ಮೆಟ್ಟಿಲು ಹತ್ತಲು ಅವಕಾಶ ಇಲ್ಲ.
ನಾಳೆಯಿಂದ ಎಲ್ಲಾ ದೇವಸ್ಥಾನಗಳಲ್ಲಿ ತೀರ್ಥಪ್ರಸಾದದ ಜೊತೆಗೆ ಅನ್ನಸಂತರ್ಪಣೆಗೂ ಅವಕಾಶ ನೀಡಲಾಗಿದೆ. ಆದರೆ ಕೋವಿಡ್ ನಿಯಮಾವಳಿಗಳನ್ನು ತಪ್ಪದೆ ಪಾಲಿಸಬೇಕು.
ಅದೆಲ್ಲದೆ ಈಗ ಇರುವ ರಾತ್ರಿ 9 ಗಂಟೆಯ ನೈಟ್ ಕರ್ಫ್ಯೂ ಕೊಂಚ ಸಡಿಲಿಕೆ ಕಾಣುತ್ತಿದ್ದು, ರಾತ್ರಿ10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.
ಸ್ವಿಮ್ಮಿಂಗ್ ಪೂಲ್ ಮತ್ತು ಪಬ್ ಗಳಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿಲ್ಲ.