ಮಾಡೆಲ್ -ನಾಯಕ ನಟಿ ಶನಯಾ ಕಾಟ್ವೆ ಜಿಹಾದಿ ಪ್ರಿಯಕರನ ಜತೆ ಸೇರಿ ಸಹೋದರನ ಕೊಲೆ ಪ್ರಕರಣ | 1000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ !
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ರುಂಡ ಮುಂಡ ಪ್ರಕರಣದಲ್ಲಿ ನಟಿ ಶನಯಾ ಕಾಟವೇ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ ಸಾವಿರ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದೀಗ ಕೊಲೆಯಾಗಿರುವ ರಾಕೇಶ ಕಾಟವೆ ಡಿಎನ್ಎ ವರದಿಯ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾ ನಟಿ, ಮಾಡಲ್ ಸೋನಿಯಾ ಅಲಿಯಾಸ್ ಶನಾಯ ಕಾಟವೆ, ತನ್ನ ಸಹೋದರ ರಾಕೇಶ್ ಕಾಟವೆಯನ್ನ ಕಳೆದ ಏಪ್ರಿಲ್ 9ರಂದು ತನ್ನ ಜಿಹಾದಿ ಗೆಳೆಯನ ಜತೆ ಸೇರಿ ಹತ್ಯೆ ಮಾಡಿದ್ದರು. ರಾಕೇಶ್ ಕಾಟವೆಯನ್ನ ಹತ್ಯೆ ಮಾಡಿ ಕಾರಿನಲ್ಲಿ ತಿರುಗಾಡಿತ್ತು ಹತ್ಯಾ ತಂಡ. ಅಲ್ಲಿ ಸತ್ತು ಹೋದ ಅಣ್ಣನ ಶವದ ಜೊತೆ ಕೂತು ಏನೂ ಆಗದವಳ ಹಾಗೆ ನಿರ್ಭಾವುಕಳಾಗಿ ತಂಗಿ ಸಂಚರಿಸಿದ್ದಳು. ನಂತರ ಆಕೆಯ ಮನೆಗೆ ಸಹೋದರನ ಸಾವನ್ನು ಅಲ್ಲಿ ರುಂಡ ಮುಂಡ ಬೇರ್ಪಡಿಸಿ ದೇಹದ ಭಾಗಗಳನ್ನ ಚಿದ್ರ ಚಿದ್ರ ಗೊಳಿಸಿದ್ದರು. ಆ ನಂತರ ಬೇರೆ ಪ್ರದೇಶಗಳಲ್ಲಿ ಎಸೆದು ಹೋಗಿದ್ದರು. ಸತ್ತು ಹೋದ ರಾಕೇಶ್ ಕಾಟವೆ ಯ ಪರವಾಗಿ ಮಿಸ್ಸಿಂಗ್ ಕಂಪ್ಲೈಂಟ್ ಕೂಡ ಕೊಡುವವರು ಯಾರೂ ಇರಲಿಲ್ಲ. ಆದ್ರೆ ಎರಡೇ ದಿನಕ್ಕೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಅರೆ ಬೆಂದ ಶವದ ಜಾಡು ಹಿಡಿದ ಪೊಲೀಸರು ಈ ಬಗ್ಗೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲು ಮಾಡಿದ್ದರು.
ಈ ಹತ್ಯೆಗೆ ಆಕೆಯ ಆಸ್ತಿ ಹೊಡೆಯುವ ಸಂಚು ಪ್ರೈಮರಿ ಮೋಟಿವ್ ಆಗಿತ್ತು. ಶನಾಯ ಹೆಸರಲ್ಲಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಆತನ ಬಾಯಲ್ಲಿ ಜೊಲ್ಲು ಸುರಿಯುವಂತೆ ಮಾಡಿತ್ತು. ನಿಯಾಜ್ ಆಕೆಯ ಪ್ರೀತಿಯ ಸೋಗು ಹಾಕಿದ್ದ. ಆದರೆ ಅಣ್ಣನಾಗಿ ರಾಕೇಶ್ ನಿಯಾಜ್ ನ ಸಂಬಂಧವನ್ನು ವಿರೋಧಿಸುತ್ತಿದ್ದ. ಇದಕ್ಕೆ ಅಡ್ಡಿಯಾಗಿದ್ದ ರಾಕೇಶ್ನನ್ನು ಎಲ್ಲಾ ಸೇರಿಕೊಂಡು ಕೊಲೆ ಮಾಡಿದ್ದರು. ದುರದೃಷ್ಟವಶಾತ್ ಆತನ ತಂಗಿ ಶಾಲೆಯ ಕಾಟ್ವೆ ಕೂಡ ಅದಕ್ಕೆ ಬೆಂಬಲಿಸಿದ್ದಳು.
ಶನಾಯ ಕಾಟವೆಯ ಪ್ರಿಯಕರ ನಿಯಾಜ್ ಕಾಟೀಗಾರ ಹಾಗೂ ಸಹಚರರು ಏಪ್ರಿಲ್ 9ರಂದು ಆಕೆಯ ಸಹೋದರ ರಾಕೇಶ್ ಕಾಟವೆಯನ್ನು ಹತ್ಯೆಗೈದಿದ್ದರು. ಆತನ ರುಂಡವನ್ನು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡವನ್ನು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು.
ಏಪ್ರಿಲ್ 12ರಂದು ಹುಬ್ಬಳ್ಳಿಯ ಪೊಲೀಸರಿಗೆ ನಿರ್ಜನ ಪ್ರದೇಶದಲ್ಲಿ ರುಂಡ ಮುಂಡ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಹುಬ್ಬಳ್ಳಿ ಧಾರವಾಡದ ಪೊಲೀಸರು ಏಪ್ರಿಲ್ 18ರಂದು ಗ್ರಾಮೀಣ ಠಾಣೆ ಪೊಲೀಸರು ಪ್ರಮುಖ ಆರೋಪಿ ಬೆಂಗೇರಿಯ ನಿಯಾಜ್ ಸೈಫುದ್ದೀನ್ ಕಾಟೇಗಾರ, ತೌಸೀಫ್ ಚನ್ನಾಪುರ, ಅಲ್ತಾಫ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವರನ್ನು ಬಂಧಿಸಿದ್ದರು. ಬಳಿಕ ಮಲೀಕಜಾನ್, ಫಿರೋಜ್ ಕಾಟೀಗಾರ, ಸೈಫುದ್ದೀನ್ ಕಾಟೀಗಾರ ಹಾಗೂ ಶನಾಯ ಕಾಟವೆಯನ್ನು ಬಂಧಿಸಿದ್ದರು.
ಇದೀಗ ತನಿಖೆಯ ಮೂಲಕ ಬರೆದಿರುವ 1000 ಪುಟಗಳ ಚಾರ್ಜ್ ಶೀಟಿನಲ್ಲಿ ಕೊಲೆ ನಡೆದ ಪ್ರೀತಿ ಮತ್ತು ಕಾರಣಗಳು ಮತ್ತು ಹತ್ತು ಹಲವು ಪೂರಕ ದಾಖಲೆಗಳು ಸೇರಿವೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಕೊಲೆಯಾದ ರಾಕೇಶ್ನ ಡಿಎನ್ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರು ಮತ್ತು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ. ವರದಿ ಬಂದ ಬಳಿಕ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಕೊಲೆಯಾದ ರಾಕೇಶ್ ಕಾಟವೆಯನ್ನು ಶನಾಯ್ ಕಾಟವೆಯವರ ತಾಯಿ ದತ್ತು ಪಡೆದಿದ್ದರು ಎನ್ನಲಾಗಿದೆ. ಆದರೆ ಮೂಲ ಪಾಲಕರು ಯಾರು ಎಂಬುದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟಿ ಶನಯಾ ಕಾಟವೆ ಹಾಗೂ 6 ನೇ ಆರೋಪಿ ನಿಯಾಜ್ ಸಹೋದರ ಫೀರೋಜ್ ಕಾಟೇಗಾರ ಹಾಗೂ 7ನೇ ಆರೋಪಿ ನಿಯಾಜ್ ತಂದೆ ಸೈಫುದ್ದೀನ್ ಕಾಟೇಗಾರಗೆ ಜಾಮೀನು ದೊರೆತಿದೆ.