ಮಾಂಸದ ಪೀಸ್ ಥರ ನಮ್ಮನ್ನು ಟ್ರೀಟ್ ಮಾಡ್ತಿದ್ರು | ಐಪಿಎಲ್ ಕ್ರಿಕೆಟ್ ನ ರಾತ್ರಿ ರಹಸ್ಯ ತೆರೆದಿಟ್ಟ ಚಿಯರ್ ಗರ್ಲ್ !!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ನಂತರ ರಾತ್ರಿಯ ವೇಳೆ ನಡೆಯುವ ಪಾರ್ಟಿಗಳ ಬಗ್ಗೆ ದಕ್ಷಿಣ ಆಫ್ರಿಕಾ ಮೂಲದ ಚಿಯರ್ ಗರ್ಲ್ ಗೇಬ್ರಿಯೆಲಾ ಪಾಸ್ಮಾಲೊಟ್ಟೂ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ಲೋಕದ ಕೀಳು ಸೆಕ್ಸ್ ಲೋಕ ಬಿಚ್ಚಿಕೊಳ್ಳುತ್ತಿದೆ. ಚಿಯರ್ ಲೀಡರ್ ಗಳು ಕ್ರಿಕೆಟ್ ಆಟದ ಮದ್ಯೇ ಮದ್ಯೆ ಮಾತ್ರ ಕುಣಿಯುವುದಲ್ಲ, ರಾತ್ರಿ ಪಾರ್ಟಿಗಳಲ್ಲಿ ಮತ್ತು ಅದರಾಚೆ ಕೂಡ ಅವರನ್ನು ತಮ್ಮ ತಾಳಕ್ಕೆ ಕುಣಿಸಲು ಕ್ರಿಕೆಟಿಗರು ಹೊಂಚು ಹಾಕುತ್ತಿದ್ದರು ಎಂಬುದು ಈಗ ಜಗಜ್ಜಾಹೀರಾಗಿದೆ.

ಪಂದ್ಯದ ನಂತರದ ಪಾರ್ಟಿಗಳಲ್ಲಿ ಕ್ರಿಕೆಟಿಗರು ಅಸಭ್ಯವಾಗಿ ವರ್ತಿಸುತ್ತಾರೆಂದು ಗೇಬ್ರಿಯೆಲಾ ಆರೋಪಿಸಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ಚಿಯರ್ ಲೀಡರ್ಸ್ ತಂಡದಿಂದ ಅವರನ್ನು ವಜಾಗೊಳಿಸಲಾಗಿತ್ತು. ಇದು ಭಾರಿ ಸುದ್ದಿಯಾಗಿತ್ತು. ಅಲ್ಲದೆ, ವಜಾಗೊಳಿಸಿದ ಬೆನ್ನಲ್ಲೇ ಟ್ವಿಟ್ ಮೂಲಕ ಐಪಿಎಲ್ ಮ್ಯಾನೇಜ್‌ಮೆಂಟ್ ಬಗ್ಗೆ ಗೇಬ್ರಿಯೆಲಾ ವಿಷ ಕಾರಿದ್ದರು.

ಗೇಬ್ರಿಯೆಲಾರನ್ನು ವಜಾಗೊಳಿಸಿ ಆಫ್ರಿಕಾಗೆ ವಾಪಸ್ ಕಳುಹಿಸಿದ ಬಳಿಕ ತನ್ನ ಟ್ವಿಟರ್ ಖಾತೆಯಲ್ಲಿಯೂ ಐಪಿಎಲ್ ಕುರಿತು ಅವರು ಬರೆದುಕೊಂಡಿದ್ದಾರೆ. ನನ್ನ ಬ್ಲಾಗ್ ಅನ್ನು ಹಗುರವಾಗಿ ಮತ್ತು ತಮಾಷೆಯಾಗಿ ತೆಗೆದುಕೊಳ್ಳಬೇಕು. ಅದರಲ್ಲಿ ಗಂಭೀರವಾಗಿ ಅಥವಾ ಹೃದಯಕ್ಕೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಆ ರೀತಿಯ ಸೀನ್ ಕ್ರಿಯೆಟ್ ಮಾಡಬಾರದು. ನನ್ನ ಬ್ಲಾಗ್ ಕೇವಲ ಕ್ರಿಕೆಟಿಗರ ಬಗ್ಗೆ ಮಾತ್ರ ಆಧರಿಸಿಲ್ಲ. ಅದರಲ್ಲಿ ಕೆಲವೇ ವಾಕ್ಯಗಳನ್ನು ಮಾತ್ರ ಅವರ ಬಗ್ಗೆ ಬರೆದಿದ್ದೇನೆ. ಇದರಿಂದ ಅವರಿಗೆ ಭಯವಾದಂತೆ ಕಾಣುತ್ತದೆ ಎಂದು ಗೇಬ್ರಿಯೆಲಾ ಬರೆದಿದ್ದಾರೆ.

Ad Widget


Ad Widget


Ad Widget

Ad Widget


Ad Widget

“ರಾತ್ರಿಯ ಪಾರ್ಟಿ ವೇಳೆ ಕ್ರಿಕೆಟಿಗರು ನಮ್ಮನ್ನು ಮಾಂಸದ ಪೀಸ್ ಗಳಂತೆ ನೋಡುತ್ತಿದ್ದರು. ಅವರು ಕುಡಿದ ನಂತರ ಮತ್ತೇರಿಸಿದೊಂಡು ಆರಾಮವಾಗಿ ನಮ್ಮನ್ನು ಸ್ಪರ್ಶಿಸಿ, ಅನುಚಿತವಾಗಿ ವರ್ತಿಸುತ್ತಿದ್ದರು. ನಾವು ಸುಲಭವಾಗಿ ಮತ್ತು ಫ್ರೀಯಾಗಿ ದೊರೆಯುತ್ತೇವೆ ಎಂದು ಅವರು ಅಂದುಕೊಂಡಿದ್ದಾರೆ ಎಂದು ಗೇಬ್ರಿಯೆಲಾ ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗೇಬ್ರಿಯೆಲಾ, ” ಅವತ್ತು ನಾನು ಅಪರಾಧಿ ಎಂಬಂತೆ ನನ್ನನ್ನು ಮನೆಗೆ ವಾಪಸ್ಸು ಕಳುಹಿಸಲಾಯಿತು. ನಾನು ಡ್ರಗ್ಸ್ ತೆಗೆದುಕೊಂಡಿದ್ದೇನೆಂದು ಬಿಂಬಿಸಲಾಯಿತು ಮತ್ತು ಅದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೇನೆಂದು ಪರಿಗಣಿಸಲಾಯಿತು. ನನಗಾದ ಅನುಭವ ಹೇಳಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಇಂತಹ ಪಾರ್ಟಿಗಳಲ್ಲಿ ಎಲ್ಲಾ ಕಡೆಯಲ್ಲೂ ಕ್ಯಾಮರಾಗಳಿದ್ದವು. ಇದನ್ನೆಲ್ಲಾ ಕ್ಯಾಮರಾವೂ ಗಮನಿಸಿದೆ. ನಮ್ಮನ್ನು ಮಾಂಸದ ತುಂಡುಗಳಂತೆ ನಡೆಸಿಕೊಂಡರು. ನಾವು ಎಲ್ಲಿಗೂ ಒಂಟಿಯಾಗಿ ಹೋಗಲು ಆಗುತ್ತಿರಲಿಲ್ಲ ಎಂದಿರುವ ಗೇಬ್ರಿಯೆಲಾ, ಯಾವುದೇ ಒಬ್ಬ ವ್ಯಕ್ತಿಯ ಕಡೆಗೆ ಬೊಟ್ಟು ಮಾಡಿ ಬರೆದಿಲ್ಲ ” ಎಂದಿದ್ದಾರೆ. ಒಟ್ಟಾರೆ ಕ್ರಿಕೆಟ್ ನ ಕತ್ತಲು ಬೆತ್ತಲು ಲೋಕ ಬೆಳಕಿಗೆ ಬರುತ್ತಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: