ಜಿಮ್ ಮಾಡುವಾಗ ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡು ಮಾಡೆಲ್ – ಬಾಡಿ ಬಿಲ್ಡರ್ | ಅತಿರೇಕಕ್ಕೆ ಹೋದ ಯುವತಿಯ ಬದುಕು 23 ವರ್ಷಕ್ಕೇ ಮಟಾಷ್ !
ಬಾಡಿ ಬಿಲ್ಡಿಂಗ್ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ. ಹಾಗೇಯೆ ಬಾಡಿ ಬಿಲ್ಡಿಂಗ್ ಮಾಡುವಾಗ ಪ್ರತಿಯೊಬ್ಬರಿಗೂ ಬೆವರು ಬರುವುದು ಮಾಮೂಲಿ ಅಂತಹದರಲ್ಲಿ ತನ್ನ ದೇಹ ಬೆವರಲೇ ಬರಬಾರದೆಂದು ಆಪರೇಷನ್ ಮಾಡಿಕೊಂಡು 23 ನೇ ವಯಸ್ಸಿನಲ್ಲಿ ತನ್ನೆಲ್ಲಾ ಕನಸುಗಳನ್ನು ಹಾಗೇ ಬಿಟ್ಟು ಸಾವಿನತ್ತ ಹೆಜ್ಜೆ ಹಾಕಿದ ಸಿಕ್ಸ್ ಪ್ಯಾಕ್ ದೇಹದ ಒಡತಿಯ ದುರಂತ ಕಥೆ ಇದು.
ಸಿಕ್ಸ್ ಪ್ಯಾಕ್ ದೇಹದ ಒಡತಿ ಮತ್ತು ಫಿಟ್ನೆಸ್ ಗುರು ಆಗಿದ್ದ ಮೆಕ್ಸಿಕೋದ ಒಡಾಲಿಸ್ ಸ್ಯಾಂಟೋಸ್ ಮೆನಾ ಜುಲೈ 7 ರಂದು ತನ್ನ 23 ನೆಯ ಅತೀ ಕಿರಿಯ ವಯಸ್ಸಿನಲ್ಲೇ ಪ್ರಾಣಬಿಟ್ಟಿದ್ದಾಳೆ. ಅನೇಕ ಕನಸುಗಳನ್ನು ಹೊತ್ತ ಈಕೆ ತನ್ನ ಕಿರಿಯ ವಯಸಿನಲ್ಲಿಯೇ ಅನೇಕ ಸಾಧನೆಗಳನ್ನು ಮಾಡಿ,ದೇಹದಾರ್ಢ್ಯಕ್ಕೆ ಸಂಬಂಧಿಸಿದಂತೆ ಮಿಸ್ ಹರ್ಕ್ಯುಲಿಸ್ 2019 ಕಿರೀಟ ಧರಿಸುವುದರ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಈಕೆ ತನ್ನ ದೇಹದಿಂದ ಬರುವ ಕೆಟ್ಟ ಬೆವರಿನ ವಾಸನೆಯನ್ನು ತಡೆಯಲು ಈಕೆ ಈ ನಿರ್ಧಾರವನ್ನು ಮಾಡಿದ್ದಾರೆ.ಆಕೆ ಒಂದು ಸ್ಕಿನ್ ಕೇರ್ ಕ್ಲಿನಿಕ್ ಜತೆ ಟೈ ಅಪ್ ಮಾಡಿಕೊಳ್ಳುತ್ತಾಳೆ.ಆ ಸ್ಕಿನ್ ಕೇರ್ ಕ್ಲಿನಿಕ್ ಸ್ಪೆಷಾಲಿಟಿ ಏನೆಂದರೆ ಆಪರೇಷನ್ ಮಾಡುವುದು.ಅದಕ್ಕೆ ಈಕೆಯನ್ನೇ ಬ್ರಾಂಡ್ ರೀತಿಯಲ್ಲಿ ಬಳಸಿಕೊಂಡು ಕ್ಲಿನಿಕ್ ಒಡಾಲಿಸ್ಗೆ ಆಪರೇಷನ್ ಮಾಡಿದೆ. ಆಕೆಯು ಇದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದಾಳೆ.
ಆದರೆ ಆಕೆಯ ಕನಸೆಲ್ಲವೂ ಈ ಆಪರೇಷನ್ ಇಂದ ಕೊನೆಗೂಳುವಂತೆ ಮಾಡಿದೆ.ಇದರಿಂದ ಉಂಟಾದ ದುಷ್ಪರಿನಾಮದಿಂದ ಆಕೆ ಕೊನೆ ಉಸಿರೆಳೆಯಬೇಕಾಯಿತು.ಆಪರೇಷನ್ ಟೇಬಲ್ ಮೇಲೆ ಅನೆಸ್ತೇಷಿಯಾ ನೀಡಿದಾಗ ಆಕೆ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟರು ಎಂದು ವರದಿಯಾಗಿದೆ. ಆಕೆಯನ್ನು ಉಳಿಸಲು ಶಕ್ತಿಮೀರಿ ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ ಎಂದು ಆಪರೇಷನ್ಗಾಗಿ ಆಕೆ ದಾಖಲಾಗಿದ್ದ ಮೆಕ್ಸಿಕೋದ ಗಾಡಲಾಗಜಾರಾದಲ್ಲಿರುವ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಈ ವಿಚಾರದಲ್ಲಿ ಮೆಕ್ಸಿಕೋ ಪೊಲೀಸ್ ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.
ದೇಹದಲ್ಲಿರುವ ರಾಸಾಯನಿಕ ಅಂಶಗಳು ಚಯಾಪಚಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆಕೆಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ತಯಾರಾಗಿದ್ದ ವೈದ್ಯಕೀಯ ಸಿಬ್ಬಂದಿಗೆ ಆಕೆ ಸ್ಟಿರಾಯ್ಡ್ಗಳನ್ನು ತೆಗೆದುಕೊಳ್ಳುತ್ತಿದ್ದ ಅಂಶವನ್ನು ಮುಂಚಿತವಾಗಿ ತಿಳಿಸಿರಲಿಲ್ಲ. ಅನೆಸ್ತೇಷಿಯಾ ನೀಡಿದ ಕೂಡಲೇ ಮೆನಾ ಅವರ ದೇಹದಲ್ಲಿ ಇದ್ದ ರಾಸಾಯನಿಕ ಅಂಶಗಳು ಪ್ರತಿಕ್ರಿಯಿಸಿ ಸಾವು ಸಂಭವಿಸಿದೆ,’ ಎಂದು ಮೆನಾ ಸಾವಿನ ನಂತರ ಸ್ಕಿನ್ಪೀಲ್ ಕ್ಲಿನಿಕ್ ಹೆಸರಿನ ಆಸ್ಪತ್ರೆಯ ಸಿಬ್ಬಂದಿಯು ತಿಳಿಸಿದ್ದಾರೆ.
ಇದೀಗ ಅವರ ಅಭಿಮಾನಿಗಳು ಆಸ್ಪತ್ರೆಯವರ ನಿರ್ಲಕ್ಷ ದಿಂದಲೇ ಸಾವು ಸಂಭಾವಿಸಿದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.