ಬೆಳ್ತಂಗಡಿ ತಾಲೂಕು ನೀರಾವರಿ ಯೋಜನೆಗೆ ಸರಕಾರದಿಂದ ರೂ.240 ಕೋಟಿ ಬಿಡುಗಡೆ | ಶಾಸಕ ಹರೀಶ್ ಪೂಂಜ
ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಬೃಹತ್ ನಿರಾವರಿ ಯೋಜನೆ ಜಾರಿಗೆ ಬಂದಿದ್ದು, ಅಂತರ್ಜಲ ವೃದ್ಧಿ ಹಾಗೆಯೇ ವಿವಿಧ ಸಂಪರ್ಕ ಕಲ್ಪಿಸುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಹಾಗೂ ಏತ ನೀರಾವರಿ ಯೋಜನೆಗಳಿಗಾಗಿ ಸರಕಾರದಿಂದ ರೂ. 240 ಕೋಟಿ ಅನುದಾನ ಬಿಡುಗಡೆಗೊಂಡಿದೆ.
ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯವರು ಬೆಳ್ತಂಗಡಿ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳ ಅಭಿವೃದ್ಧಿ ಕಾರ್ಯಗಳಿಗೆ ರೂ.240 ಕೋಟಿ ಅನುದಾನವನ್ನು ಘೋಷಿಸಿದ್ದಾರೆ.
ಈ ಅನುದಾನವು ಮೊಗ್ರು ಗ್ರಾಮದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ, ಇಳಂತಿಲ,ಬಂದಾರು,ಕಣಿಯೂರು,ಉರುವಾಲು, ಕಳಿಯ,ನ್ಯಾಯತರ್ಪು, ಓಡಿಲ್ನಾಳ, ಕುವೆಟ್ಟು ಗ್ರಾಮಗಳಲ್ಲಿ ನೀರಾವರಿ ಸೌಲಭ್ಯವನ್ನು ಅಭಿವೃದ್ಧಿಗೊಳಿಸಲು ಮತ್ತು ಗುರುವಾಯನಕೆರೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಲಿದೆ.
ಸರಕಾರದ ಈ ಅನುದಾನ ಬಿಡುಗಡೆಗೆ ಶ್ರಮಿಸಿದ ಬೆಳ್ತಂಗಡಿಯ ಹೆಮ್ಮೆಯ ಮತ್ತು ಅಭಿವೃದ್ಧಿಯ ಶಾಸಕ ಹರೀಶ್ ಪೂಂಜರವರು ಈ ಮಾಹಿತಿಯನ್ನು ತಿಳಿಸಿದ್ದಾರೆ.