ಬೆಳ್ತಂಗಡಿ, ಕನ್ಯಾಡಿ |ಪುಟ್ಟ ಹೆಂಡ್ತಿ ಜತೆ ಓಡಿ ಹೋದ ಗಂಡ, ಹುಡುಕಿ ತಂದ ಪೊಲೀಸರು ; ಅಕ್ಕ ಬೇಡ ನಂಗೆ ಬಾವನೇ ಬೇಕೆಂದು ಹಠ ಹಿಡಿದು ಕೂತ ತಂಗಿ !
ಕನ್ಯಾಡಿಯಲ್ಲಿ ಕಳೆದ ವಾರ ಅಕ್ಕನ ಗಂಡನೊಂದಿಗೆ ಯುವತಿ ನಾಪತ್ತೆಯಾದ ಪ್ರಕರಣದಲ್ಲಿ ಒಂದಷ್ಟು ಹೊಸ ಡೆವಲಪ್ಮೆಂಟ್ ಗಳು ನಡೆದಿದ್ದು, ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಬೆಳ್ತಂಗಡಿ ಪೋಲಿಸರು ಕೊಡಗಿನಲ್ಲಿ ಮುಸ್ತಫಾ-ರೈಹಾನ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ.
ಬೆಳ್ತಂಗಡಿ ಪೋಲಿಸರು ಇಬ್ಬರನ್ನೂ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ರೈಹಾನ ಮಾತ್ರ ಮುಸ್ತಫಾನನ್ನು ಬಿಟ್ಟು ಕೊಟ್ಟಿಲ್ಲ. ತಾನು ಸ್ವಇಚ್ಛೆಯಿಂದ ಆತನ ಜೊತೆಗೆ ಹೋಗಿದ್ದು, ನನಗೆ ಆತನೇ ಬೇಕು. ಆತನೊಂದಿಗೆ ಹೋಗಲು ಸಾಧ್ಯವಾಗಲಿಲ್ಲದ್ದರೆ ನಾನು ರಿಮಾಂಡ್ ಹೋಂಗೆ ಹೋಗುತ್ತೇನೆ. ಆದರೆ ತಂದೆ ತಾಯಿಯ ಜೊತೆ ಹೋಗಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾಳೆ.
ಅಂತಿಮವಾಗಿ ಪೋಲಿಸರು ಬುಧವಾರ ಸಂಜೆ ರೈಹಾನಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆಗಲೂ ಅದೇ ರೀತಿ ಹೇಳಿಕೆ ನೀಡಿದ ಕಾರಣಕ್ಕಾಗಿ ಆಕೆಯನ್ನು ಮಂಗಳೂರಿನ ರಿಮಾಂಡ್ ಹೋಂಗೆ ಕಳುಹಿಸಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ಯಾಡಿ ಗ್ರಾಮದ ದೆರ್ಲಾಕ್ಕಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಎಂಬವರ ಹಿರಿಯ ಮಗಳನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ತಮ್ಮ ಶಕ್ತ್ಯಾನುಸಾರ ಚೆನ್ನಾಗಿಯೇ ಅವರು ಮದುವೆ ಮಾಡಿಕೊಟ್ಟಿದ್ದರು ಮನೆಯವರು. ಮೊದಲಿಗೆ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ವಾಸವಾಗಿದ್ದ ಅವರು ಬಳಿಕ ಕೋಣಾಜೆ, ತದನಂತರ ಗುರುಪುರ ಎಂಬಲ್ಲಿಗೆ ವಾಸ ಬದಲಿಸಿದ್ದರು.
ಅತ್ತ ಮುಸ್ತಾಫಾ ಮದುವೆಯಾದ ಒಂದೇ ತಿಂಗಳಲ್ಲಿ ತನ್ನ ಪತ್ನಿಯ ಸ್ವಂತ ತಂಗಿಯ ಮೇಲೆ ಕಣ್ಣು ಬೀರಿದ್ದ. ಆಕೆ ಕೂಡ ಕಣ್ಣು ಕೂಡಿಸಿದ್ದಳು. ಹಾಗೆ ಗೆಳೆತನ ಶುರುವಾಗಿತ್ತು. ತಂಗಿಗೆ ಬಾವನ ಮೇಲೆ ಆಕರ್ಷಣೆ ಬಲವಾಗುತ್ತಾ ಹೋಗಿತ್ತು. ಬಾವನಿಗೆ ಹೆಂಡ್ತಿ ತಂಗಿ ಪುಟ್ಟ ಹೆಂಡ್ತಿನೇ ಆಗಿ ಹೋಗಿದ್ದಳು. ಹಾಗೆ ಅವಳ ಜೊತೆಗೆ ಸಲುಗೆ ಸಾಧಿಸಿದ ಈ ಮುಸ್ತಫಾ, ಆಕೆಯ ಜೊತೆಗೆ ಹೊಸ ಸಂಬಂಧ ಶುರುವಿತ್ತಿದ್ದ. ಪತ್ನಿ ಆತನಿಗೆ ಬೋರು ಹೊಡೆಸಲು ಪ್ರಾರಂಭವಾಗಿದ್ದಳು. ಆಗ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲು ಶುರುಮಾಡಿದ್ದ.
ಇದರಿಂದ ಮನನೊಂದ ಪತ್ನಿ ಮದುವೆಗೆ ತವರುಮನೆಯಿಂದ ನೀಡಿದ್ದ ಚಿನ್ನಾಭರಣಗಳೊಂದಿಗೆ ತನ್ನ ತವರು ಮನೆಗೆ ಬಂದಿದ್ದಾಳೆ. ಆಗ ಅವಕಾಶ ಹೊಂಚು ಹಾಕಿಕೊಂಡು ಕೂತಿದ್ದ ಆಕೆಯ ತಂಗಿ ಅಕ್ಕನಲ್ಲಿರುವ ಚಿನ್ನಾಭರಣವನ್ನು ರಾತ್ರೋರಾತ್ರಿ ಎಗರಿಸಿ ಅದನ್ನು ಬೆಳ್ತಂಗಡಿಯ ಖಾಸಗಿ ಫೈನಾನ್ಸ್ ಒಂದರಲ್ಲಿ ಅಡವಿಟ್ಟು ಆ ಹಣವನ್ನು ಮುಸ್ತಫಾನ ಕೈಗೆ ನೀಡುತ್ತಾಳೆ.
ಇದಾಗಿ ಒಂದು ವಾರಗಳಲ್ಲಿಯೇ ತನ್ನ ತಂದೆ ಬೀಡಿ ಕಾರ್ಮಿಕರಿಗೆ ಮಜೂರಿಗಾಗಿ ನೀಡಲು ಶೇಖರಿಸಿಟ್ಟಿದ್ದ 65 ಸಾವಿರ ರೂಪಾಯಿಗಳ ಜೊತೆಗೆ ತನ್ನ ಸ್ವಂತ ಅಕ್ಕನ ಗಂಡ ಮುಸ್ತಾಫಾ ಜೊತೆಗೆ ಕಾರು ಹತ್ತಿ ಪರಾರಿಯಾಗಿದ್ದಳು. ಇದೀಗ ಅಕ್ಕನ ಬಾಳು ಹಾಳು ಮಾಡಿದ ತಂಗಿ ಸಿಕ್ಕಿದ್ದಾಳೆ. ನಂಗೆ ಅಕ್ಕನಿಗಿಂತ ಬಾವ ಮುಕ್ಯ ಎಂದು ಹಠ ಹಿಡಿದು ಕೂತಿದ್ದಾಳೆ. ನ್ಯಾಯಾಲಯದ ಅಂಗಳದಲ್ಲಿ ಕೇಸು, ಮತ್ತು ರಿಮಾಂಡ್ ಹೋಮಿನಲ್ಲಿ ಹುಡುಗಿ ಬಾವನಿಗಾಗಿ ಕಾದು ಕೂತಿದ್ದಾಳೆ.