ಆಕಸ್ಮಿಕವಾಗಿ ಬಾವಿಗೆ ಬಿದ್ದ 8 ವರ್ಷದ ಬಾಲಕಿ | ರಕ್ಷಣೆಗೆ ತೆರಳಿದ್ದ ಸುಮಾರು 40ಕ್ಕೂ ಹೆಚ್ಚು ಜನ ಬಾವಿ ಪಾಲು !
ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ತೆರಳಿದ್ದ ಸುಮಾರು 40ಕ್ಕೂ ಹೆಚ್ಚುಜನ ಮಣ್ಣು ಕುಸಿದು ಬಾವಿಪಾಲಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ನಾಲ್ಕು ಮಂದಿ ಮೃತರಾಗಿದ್ದಾರೆ. ಬಾವಿಗೆ ಬಿದ್ದ ನಲವತ್ತು ಜನರ ಪೈಕಿ 15 ಜನರನ್ನು ರಕ್ಷಿಸಲಾಗಿದ್ದು ಉಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆ ವಿವರ : ಮಧ್ಯ ಪ್ರದೇಶದ ವಿಧಿಶಾ ಜಿಲ್ಲೆಯ ಗಂಜ್ಈ ಬಸೋದ ಎಂಬಲ್ಲಿ ಈ ಘಟನೆ ನಡೆದಿದ್ದು,ಬಾಲಕಿಯೊಬ್ಬಳು ಸಂಜೆ 6 ಗಂಟೆಯ ಹೊತ್ತಿಗೆ ಬಾವಿಯ ಬಳಿ ಆಟವಾಡುತ್ತಿರುವ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಬಾವಿಗೆ ಬಿದ್ದಿದ್ದಳು. ತಕ್ಷಣವೇ ವಿಷಯ ಗ್ರಾಮದ ಸುತ್ತಲೂ ಹಬ್ಬಿ, ನೂರಾರು ಜನ ರಕ್ಷಣಾ ಕಾರ್ಯಕ್ಕೆ ತಮ್ಮದೇ ಆದ ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಲಿ ಸೇರಿದ್ದರು. ಆ ಸಂದರ್ಭದಲ್ಲಿ ಬಾವಿಯ ಸುತ್ತಲಿನ ಕಟ್ಟೆ ಜನರ ಭಾರತ ಕುಸಿದುಬಿದ್ದು ಸುಮಾರು 40 ಜನ ಬಾವಿಗೆ ಬಿದ್ದು ಬಿಟ್ಟಿದ್ದಾರೆ. 50 ಅಡಿ ಆಳದ ಬಾವಿಯಲ್ಲಿ ಮಳೆಗಾಲವಾದ ಕಾರಣ 20 ಅಡಿಗಳಷ್ಟು ನೀರು ತುಂಬಿತ್ತು.16 ಜನರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಘಟನೆ ನಡೆದ ಕೂಡಲೇ ಎನ್ಡಿಆರ್ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತನಿಖೆಗಾಗಿ ಆದೇಶಿಸಿದ್ದಾರೆ.
ಸದ್ಯ ನಾಪತ್ತೆಯಾದವರ ಬಗ್ಗೆ ಏನೂ ಹೇಳಲಾಗದು ಎಂದು ಅಧಿಕಾರಿ ವರ್ಗ ಹೇಳುತ್ತಿದ್ದರೆ, ಬದುಕಿ ಬರಲಿ ಎಂಬ ಗ್ರಾಮಸ್ಥರ ಪ್ರಾರ್ಥನೆ ದೇವರಿಗೆ ಕೇಳಿಸಲಿ ಎಂಬುವುದೇ ಎಲ್ಲರ ಬಯಕೆ.