ಯುನಿಸೆಕ್ಸ್ ಸೆಲೂನ್ ಗೆ ಗೂಳಿಯಂತೆ ನುಗ್ಗಿದ ಮಂಗಳೂರಿನ ದಾವೂದ್ | ಮಹಿಳೆ ಮೇಲೆ ಕೈ ಹಾಕಿದವನೀಗ ಜೈಲು ವಾಸಿ

ನಗರದ ಕದ್ರಿಯ ಯುನಿಸೆಕ್ಸ್ ಸೆಲೂನ್ ಒಂದಕ್ಕೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯ ಮೈಮೇಲೆ ಕೈ ಹಾಕಿ ಕಿರುಕುಳ ನೀಡಿ ದರೋಡೆ ಮಾಡಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.

ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಬಂಧಿತ ಆರೋಪಿ. ಈತ ಜುಲೈ 1 ರಂದು ಮಂಗಳೂರಿನ ಕದ್ರಿಯಲ್ಲಿರುವ ಬ್ಲಿಸ್ ಸಿಗ್ನಚರ್ ಯುನಿಸೆಕ್ಸ್ ಸೆಲೂನ್ ಗೆ ಗ್ರಾಹಕನಾಗಿ ಬಂದಿದ್ದ. ಸೆಲೂನ್ ಒಳಗೆ ನುಗ್ಗಿ ಒಂಟಿಯಾಗಿದ್ದ ಮಹಿಳೆಯ ಮೈಗೆ ಕೈ ಹಾಕಿ ಕಿರುಕುಳ ನೀಡಿ ಹಲ್ಲೆ ನಡೆಸಿದ್ದನು. ಬಳಿಕ 14 ಸಾವಿರ ರೂಪಾಯಿ ಹಣವನ್ನು ದರೋಡೆ ನಡೆಸಿ ಪರಾರಿಯಾಗಿದ್ದನು.

ಬಳಿಕ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ದಾವೂದ್ ಮಹಿಳೆಗೆ ಕಿರುಕುಳ ನೀಡಿರುವ ದೃಶ್ಯ ಸೆಲೂನ್ ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: