ಶೃಂಗೇರಿ ಆಸಿಡ್ ದಾಳಿಗೆ ಸಿಕ್ಕಿದೆ ನ್ಯಾಯ | ಬ್ಯೂಟಿ ಪಾರ್ಲರ್ ಹುಡುಗಿಗೆ ಆಸಿಡ್ ಎರಚಿ ಮನೋ ವಿಕೃತಿ ಮೆರೆದಿದ್ದ ಆರೋಪಿಗಳಿನ್ನು ಜೀವನ ಪರ್ಯಂತ ಜೈಲಿನಲ್ಲಿ
ಚಿಕ್ಕಮಗಳೂರು: ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆಸಿ ಮನೋ ವಿಕೃತಿ ಮೆರೆದಿದ್ದ ನಾಲ್ಕು ಜನ ಆರೋಪಿಗಳಿಗೆ ಇದೀಗ ಶಿಕ್ಷೆ ಪ್ರಕಟ ಆಗಿದೆ.
ಸುದೀರ್ಘ ಆರು ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಚಿಕ್ಕಮಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದ್ದಾರೆ.
2015ರ ಏಪ್ರಿಲ್ 18ರಂದು ಶೃಂಗೇರಿ ತಾಲೂಕಿನ ಮೆಣಸೇ ಗ್ರಾಮ ವಾಸಿ, ಶೃಂಗೇರಿಯಲ್ಲಿ ಎಸ್ ಟಿಡಿ ಬೂತ್ ನಡೆಸುತ್ತಿದ್ದ ಗಣೇಶ್ ಅಲಿಯಾಸ್ ಗಣಿ ಎಂಬುವವರು ತನ್ನ ಸ್ನೇಹಿತರೊಂದಿಗೆ ಸೇರಿ ಆಸಿಡ್ ಎರಚುವ ಮೂಲಕ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿತ್ತು. ಬ್ಯೂಟಿ ಪಾರ್ಲರ್ ಹುಡುಗಿಯ ಬ್ಯೂಟಿಯನ್ನು ಮತ್ತು ನೆಮ್ಮದಿಯ ಬದುಕನ್ನು ಈ ರಕ್ಕಸರು ಕಸಿದುಕೊಂಡಿದ್ದರು.
ಆರೋಪಿ ಗಣೇಶ್ ಹಾಗೂ ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಸಂತ್ರಸ್ಥ ಮಹಿಳೆ ಒಂದೇ ಊರಿನವರಾಗಿದ್ದು ಸ್ನೇಹಿತರಾಗಿದ್ದರು. ಗಣೇಶ್ ತನ್ನನ್ನು ಮದುವೆಯಾಗುವಂತೆ ಈ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದಿದ್ದನು.ಆದರೆ ಮಹಿಳೆ ಮದುವೆಗೆ ತಿರಸ್ಕರಿಸಿದ್ದರು. ಈ ಕಾರಣಕ್ಕೆ ಗಣೇಶ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಆಸಿಡ್ ದಾಳಿ ಸಂಚು ಮಾಡಿದ್ದರು. ಅದೇ ದಿನ ರಾತ್ರಿ ಸುಮಾರು 8.45ರ ಸಮಯ ಮಹಿಳೆಯು ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ದ್ವಿಚಕ್ರವಾಹನದಲ್ಲಿ ಮನೆಗೆ ಬರುವಾಗ ಹಿಂದಿನಿಂದ ಬೈಕಿನಲ್ಲಿ ಬಂದ ಆರೋಪಿಗಳು,ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ಮಾತನಾಡಿಸಿ ಆಸಿಡ್ ಎರಚಿದ್ದರು. ದಾಳಿಯಲ್ಲಿ ಬಲಗಣ್ಣು ಸುಟ್ಟು ಎಡಗಣ್ಣು ಭಾಗಶಃ ಹಾನಿಯಾಗಿತ್ತು ಮತ್ತು ಮೈ ಕೈ ಕಾಲು ಸಹ ಸುಟ್ಟಿತ್ತು. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳಾದ ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್, 6 ವರ್ಷದಿಂದ ಸುದೀರ್ಘ ವಿಚಾರಣೆಯಾದ ಬಳಿಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಅಂದಿನ ಸರ್ಕಲ್ ಇನ್ಸ್ಪೆಕ್ಟರ್ .ಈ ಕೇಸ್ ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿ.ಎಸ್.ಮಮತಾ ಕಾರ್ಯ ನಿರ್ವಹಿಸಿದ್ದರು.ಸುಧೀರ್ ಕುಮಾರ್ ಹೆಗಡೆ ಅವರು ಪ್ರಕರಣದ ತನಿಖೆ ನಡೆಸಿ ಕೋರ್ಟಿಗೆ ದೋಷರೋಹಣ ಪಟ್ಟಿ ಸಲ್ಲಿಸಿದ್ದರು.ಈ ಕೇಸ್ ನಲ್ಲಿ ಪಬ್ಲಿಕ್ ಪ್ರಾಸಿಕ್ ಪ್ರಾಸಿಕ್ಯೂಟರ್ ಆಗಿ ಬಿ ಎಸ್ ಮಮತಾ ಕಾರ್ಯ ನಿರ್ವಸಿಸಿದ್ದರು.