ಸಂಗಾತಿಯ ಜೊತೆಗೆ ಸ್ನಾನ ಮಾಡಲಿಚ್ಚಿಸುವ ಮೊದಲೊಮ್ಮೆ ಯೋಚಿಸಿ..ನಿಮ್ಮ ಅತಿಯಾಸೆ ದಾಂಪತ್ಯದಲ್ಲಿ ಬಿರುಕು ಮೂಡಿಸಬಹುದು.

ದಾಂಪತ್ಯ ಜೀವನ ಎಂದಮೇಲೆ ಅಲ್ಲಿ ಎಲ್ಲಾ ತರಹದ ಸುಖ ದುಃಖ ಇರುವುದು ಸಾಮಾನ್ಯ.ಉತ್ತಮ ದಾಂಪತ್ಯ ಜೀವನದಲ್ಲಿ ಲೈಂಗಿಕ ಜೀವನವು ಅತೀ ಅಗತ್ಯ. ಲೈಂಗಿಕ ಜೀವನ ಸರಿಯಾಗಿ ಇಲ್ಲದೆ ಇದ್ದರೆ ಮಾನಸಿಕ ಸಮಸ್ಯೆ ಹಾಗೂ ದಾಂಪತ್ಯದಲ್ಲಿ ಬಿರುಕು ಮುಂತಾದ ಹಲವು ಸಮಸ್ಯೆಗಳು ಕಂಡುಬರುತ್ತದೆ.

 

ಲೈಂಗಿಕವಾಗಿ ಹೆಚ್ಚು ಆಸಕ್ತಿ ಹೊಂದಿದ ಪುರುಷರು ತಮ್ಮ ಸಂಗಾತಿಯೊಂದಿಗೆ ಕೆಲವೊಂದು ಸಲ ಜೊತೆಯಾಗಿ ಸ್ನಾನ ಮಾಡಬೇಕೆಂಬ ಬಯಕೆಯಲ್ಲಿರುತ್ತಾರೆ.ಇದರಿಂದ ಲೈಂಗಿಕವಾಗಿ ಅವರಿಬ್ಬರೂ ಹೆಚ್ಚು ಹತ್ತಿರವಾಗುವ ಸಾಧ್ಯತೆ ಹೆಚ್ಚಿದ್ದು ಹೊಸ ಆಕರ್ಷಣೆಯ ಜೊತೆಗೆ ಹೊಸ ಹುರುಪನ್ನು ತರುವಲ್ಲಿ ಹೆಚ್ಚು ಹೊಸತನ ಹುಡುಕುವುದು ಸಾಮಾನ್ಯ.

ಆದರೆ ಕೆಲ ಅಧ್ಯಯನಗಳ ಪ್ರಕಾರ ಸಂಗಾತಿಯೊಂದಿಗೆ ಸ್ನಾನ ಮಾಡುವುದು ಸರಿಯಲ್ಲ ಎಂದು ದೃಢಪಟ್ಟಿದೆ. ಇದಕ್ಕೆ ಉದಾಹರಣೆಯಂತೆ ಐದು ಕಾರಣಗಳಿವೆ.

ಸಂಗಾತಿ ಜೊತೆಯಲ್ಲಿ ಸ್ನಾನ ಮಾಡುವುದು ಹೆಚ್ಚಿನ ಖುಷಿ ಕೊಡುತ್ತದೆಂದು ನೀವು ಭಾವಿಸಿದ್ದರೆ ಅದು ತಪ್ಪು.ಇಬ್ಬರೂ ಒಟ್ಟಿಗೇ ಶವರ್ ನ ಅಡಿಯಲ್ಲಿ ನಿಂತು ಸ್ನಾನ ಮಾಡುವಾಗ ನೀರು ಸರಿಯಾಗಿ ಬೀಳದಿರಬಹುದು, ಇದರಿಂದ ಒಬ್ಬರು ಶವರ್ ನಡಿಯಲ್ಲಿ ನಿಂತರೆ ಇನ್ನೊಬ್ಬರಿಗೆ ಚಳಿ ಆಗಬಹುದು.ಇದರಿಂದ ಎರಡೆರಡು ಸಲ ಸ್ನಾನ ಮಾಡುವುದು ಅಗತ್ಯವಾಗುತ್ತದೆ.

ಅದಲ್ಲದೇ ನೀರು ಬಿದ್ದು ನೆಲವು ಒದ್ದೆಯಾಗಿರುವುದರಿಂದ ನೀವು ಅಲ್ಲಿ ತುಂಟಾಟದಲ್ಲಿ ತೊಡಗಿಕೊಂಡರೆ, ಕಾಲು ಜಾರಿ ಬೀಳುವ ಸಾಧ್ಯತೆಯು ಹೆಚ್ಚಿದ್ದು ಇಂತಹ ಸಂದರ್ಭದಲ್ಲಿ ನೀವು ತುಂಬಾ ಜಾಗ್ರತೆ ವಹಿಸುವುದು ಅತೀ ಅಗತ್ಯ.

ಅಷ್ಟೂಮಾತ್ರವಲ್ಲದೆ,​ಇಬ್ಬರಿಗೂ ನೀರಿನ ತಾಪಮಾನವು ಬೇರೆ ಬೇರೆ ರೀತಿಯಲ್ಲಿ ಬೇಕಾಗುತ್ತದೆ. ಒಬ್ಬರಿಗೆ ಹೆಚ್ಚು ಬಿಸಿನೀರು, ಇನ್ನೊಬ್ಬರಿಗೆ ತುಸುಬಿಸಿ ನೀರು ಅಥವಾ ತಣ್ಣೀರು ಅಭ್ಯಾಸವಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರಲ್ಲೂ ಮನಸ್ತಾಪಗಳು ಮೂಡಲು ಕಾರಣವಾಗುತ್ತದೆ. ಆದ್ದರಿಂದ ದಾಂಪತ್ಯ ಜೀವನದ ಸುಖ ಸವಿಯುವಲ್ಲಿ ಅತಿಯಾಸೆಯಿಂದ ಮನಸ್ತಾಪ ಕ್ಕೆ ಅವಕಾಶ ಕೊಡದಿರಿ. ನಿಮ್ಮ ಸಂಗಾತಿಯನ್ನು ಹೂವಿನಂತೆ ಪ್ರೀತಿಸಿ ಎಂಬುವುದೇ ಆಶಯ.

Leave A Reply

Your email address will not be published.