ಪ್ರವಾಹದಲ್ಲಿ ಸಂಪೂರ್ಣ ಮುಳುಗಿದ್ದ ಸೇತುವೆಯ ಮೇಲೆ ಫುಲ್ ಜನರನ್ನು ತುಂಬಿಕೊಂಡು ಬಸ್ ಚಲಾಯಿಸಿದ ಸಾರಿಗೆ ಬಸ್ ಡ್ರೈವರ್ !
ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದ ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿ ಧೈರ್ಯ ಪ್ರದರ್ಶಿಸಲು ಹೋಗಿ ಅಮಾನತ್ ಆಗಿದ್ದಾನೆ.
ಈ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ.
ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಅಲ್ಲಿ ಸುರಿದ ಕುಂಭ ದ್ರೋಣ ಮಳೆಯ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಅಲ್ಲಿ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ಎಂಎಸ್ಆರ್’ಟಿಸಿ ಬಸ್ ಚಾಲಕ ದುಸ್ಸಾಹಸಕ್ಕೆ ಕೈಹಾಕಿದ್ದು, ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ.
ಬಸ್ಸೇನೋ ಸುರಕ್ಷಿತವಾಗಿ ಇನ್ನೊಂದು ದಡ ಸೇರಿದೆ. ಆದರೆ ಬಸ್ಸಲ್ಲಿ ರುವ ಅಷ್ಟು ಜನರ ಪ್ರಾಣದ ರಿಸ್ಕ್ ತೆಗೆದುಕೊಂಡ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು ತಕ್ಷಣವೇ ಜನರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕನನ್ನು ಅಮಾನತು ಮಾಡಿದ್ದಾರೆ.