ಬಂಟ್ವಾಳ:ಸ್ನಾನ ಮಾಡುತ್ತಿದ್ದಾಗ ಗೀಜರ್ ನಿಂದ ಹೊರಬಂದ ವಿಷಾನಿಲ…ಸ್ನಾನ ಗೃಹದಲ್ಲೇ ಉಸಿರುಗಟ್ಟಿ ಯುವಕ ಮೃತ್ಯು
ಯುವಕನೋರ್ವ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಝರ್ ನಿಂದ ಹೊರಬಂದ ವಿಷಾನಿಲ ಸೇವಿಸಿ ಮೃತಪಟ್ಟ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.
ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಎಂಬಾತನು ಸ್ನಾನದ ಕೊಠಡಿಯ ಒಳಗಿದ್ದ ಗ್ಯಾಸ್ ಗೀಸರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಗೀಝರ್ ನಿಂದ ಹೊರ ಬಂದ ಕಾರ್ಬನ್ ಮಾನಾಕ್ಸೆಡ್ ಸೇವಿಸಿ ಮೃತಪಟ್ಟಿದ್ದಾರೆ. ಸ್ನಾನಕ್ಕೆಂದು ತೆರಳಿದ್ದ ಇಜಾಝ್ ಅಹ್ಮದ್ ಒಂದು ಗಂಟೆ ಹೊತ್ತಾದರೂ ಹೊರ ಬಾರದೇ ಇದ್ದುದರಿಂದ ಬಾಗಿಲು ಒಡೆದು ನೋಡಿದಾಗ ಆತ ಸ್ನಾನದ ಕೊಠಡಿಯಲ್ಲಿ ಬಿದ್ದಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರಾದರೂ ಕಾಲ ಮುಂದೆ ಹೋಗಿತ್ತು.