ಆಮ್ ಆದ್ಮಿ ಪಾರ್ಟಿಯ ದ.ಕ. ಮತ್ತು ಉಡುಪಿ ವೀಕ್ಷಕರಾಗಿ ಅಶೋಕ್ ಎಡಮಲೆ ಆಯ್ಕೆ

Share the Article

ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವೀಕ್ಷಕರಾಗಿ, ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಸಂಚಾಲಕರಾದ ಶ್ರೀ ಅಶೋಕ್ ಎಡಮಲೆ ಯವರನ್ನು ನಿಯುಕ್ತಿ ಮಾಡಲಾಗಿದೆ.

ಎಎಪಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನೀ ಯವರು ನಿಯುಕ್ತಿಯ ಆದೇಶ ಹೊರಡಿಸಿದ್ದಾರೆ.

ಅಶೋಕ್ ರವರು ಸುಳ್ಯ ಕ್ಷೇತ್ರ ಸಮಿತಿ ಸಂಚಾಲಕರಲ್ಲದೆ, ರಾಜ್ಯ ಸಮಿತಿ ಮತ್ತು ರಾಜ್ಯ ವಿದ್ಯಾರ್ಥಿ ವಿಭಾಗ CYSS ಸಂಘಟನಾ ಜವಾಬ್ದಾರಿಯನ್ನು ವಹಿಸಿದ್ದರು.

ಪಕ್ಷವನ್ನು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಜ್ಜುಗೊಳಿಸಲು ಆಮ್ ಆದ್ಮಿ ಪಾರ್ಟಿಯು ರಾಜ್ಯಾದ್ಯಂತ ಪಕ್ಷ ಸಂಘಟನೆ ನಡೆಸುತ್ತಿದೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಅಶೋಕರಿಗೆ ನೀಡಲಾಗಿದೆ.

Leave A Reply

Your email address will not be published.