ಕಾಲುಜಾರಿದ ಒಬ್ಬನನ್ನು ರಕ್ಷಿಸಲು ನದಿಗೆ ಇಳಿದ ಒಂದೇ ಕುಟುಂಬದ 12 ಜನ ನೀರುಪಾಲು !
ಲಕ್ನೋ: ಇವತ್ತು ಉತ್ತರಪ್ರದೇಶದ ಲಕ್ನೋದ ಸರಯೂ ನದಿ ತೀರದಲ್ಲಿ ಸಾವಿನ ರಣಕೇಕೆ. ಅಲ್ಲಿ ಒಂದೇ ಕುಟುಂಬದ 12 ಜನರು ನೀರು ಪಾಲಾಗಿರುವ ಘಟನೆ ನಡೆದಿದೆ. ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಕುಟುಂಬಸ್ಥರ ಮತ್ತು ಊರವರ ಆಕ್ರಂದನ ಕೇಳಿಬರುತ್ತಿದೆ.
ಆಗ್ರಾ ಮೂಲದ ಒಂದೇ ಕುಟುಂಬದ 15 ಜನ ಅಯೋಧ್ಯಾ ಶ್ರೀರಾಮನ ದರ್ಶನಕ್ಕೆಂದು ಆಗಮಿಸಿತ್ತು ದರ್ಶನಕ್ಕೆಂದು ಆಗಮಿಸಿತ್ತು. ಶ್ರೀರಾಮನ ದರ್ಶನ ಪಡೆದು ವಾಪಸ್ ಹಿಂದಿರುವಾಗ ಅವರೆಲ್ಲರೂ ಪಕ್ಕದ ಗುಪ್ತಾರ್ ಘಾಟ್ ಗೆ ತೆರಳಿದ್ದಾರೆ. ನದಿಯ ಮೆಟ್ಟಿಲುಗಳ ಕೆಲವರು ಸ್ನಾನಕ್ಕೆ ಮುಂದಾಗಿದ್ದಾರೆ. ನದೀ ನೀರಿನ ಹರಿವು ಹೆಚ್ಚಾಗಿದ್ದರಿಂದ ಒಬ್ಬರು ಕಾಲು ಜಾರಿ ನೀರು ಪಾಲಾಗಿದ್ದಾರೆ. ಒಬ್ಬರ ರಕ್ಷಣೆಗಾಗಿ ನದಿಗೆ ಒಟ್ಟೊಟ್ಟಿಗೆ ಇಳಿದ 12 ಜನ ಕೂಡಾ ನೀರುಪಾಲಾಗಿದ್ದಾರೆ. ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ. ಈತನಕ 12ರಲ್ಲಿ ಆರು ಶವಗಳ ಪತ್ತೆಯಾಗಿದ್ದು, ಇನ್ನೂ ಮೂವರ ಪತ್ತೆಗಾಗಿ ಶೋಧನಾ ಕಾರ್ಯ ಮುಂದುವರಿದಿದೆ.
ರಕ್ಷಣೆಗೊಳಗಾದ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳೀಯ ನಾವಿಕರ ನೆರವಿನೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಉಳಿದ ಮೂವರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಅಯೋಧ್ಯೆಯ ಜಿಲ್ಲಾಧಿಕಾರಿ ಅನುಜ್ ಕುಮಾರ್ ತಿಳಿಸಿದ್ದಾರೆ.