ಸೀರೆಯಲ್ಲಿ ಚಂದ ಕಾಣುತ್ತಿದ್ದ ಆಕೆಯನ್ನು ತಬ್ಬಿ ಹಿಡಿದ ಮನೆ ಓನರ್ | ಕಿಸ್ ಕೊಟ್ರೆ ಬಾಡಿಗೆ ಮನ್ನಾ ಎಂದಾತ ಜೈಲೆಂಬ ಬಾಡಿಗೆ ಮನೆಗೆ ಶಿಫ್ಟ್

ಚೆನ್ನೈ: ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪದೇ ಪದೇ ಬಾಡಿಗೆದಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು,
ಇದೀಗ ಈ ಬಾಡಿಗೆದಾರ, ಅನಿವಾರ್ಯವಾಗಿ ಜೈಲೆಂಬ ಹೊಸ ಬಾಡಿಗೆ ಮನೆಯಲ್ಲಿರಬೇಕಾದ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ.

ಜಯಕುಮಾರ್ ಎಂಬ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಳು ಆ ಮಹಿಳೆ. ಆತ ಪದೇ ಪದೇ ತಮ್ಮ ಪತಿ ಇಲ್ಲದಾಗ ಈತ ಬಂದು ಕಿಸ್ ಕೊಡು, ಕಿಸ್ ಕೊಡು ಎಂದು ಕಿಸಪಿಸ ಮಾಡುತಿದ್ದ. ನೀವು ಬಾಡಿಗೆ ಕೊಡುವುದು ಬೇಡ, ಬಾಡಿಗೆ ಮನ್ನಾ ಮಾಡುತ್ತೇನೆ. ಒಂದು ಕಿಸ್ ಕೊಡು ಎಂದು ಪೀಡಿಸುತ್ತಿದ್ದ.

ಜಯಕುಮಾರ್ ಆಟೋ ಚಾಲಕರಾಗಿರುವರೊಬ್ಬರಿಗೆ ಮನೆ ಬಾಡಿಗೆ ನೀಡಿದ್ದಾರೆ. ಚಾಲಕ ಮತ್ತು ದಂಪತಿ ಮಾತ್ರ ಆ ಮನೆಯಲ್ಲಿ ವಾಸವಾಗಿದ್ದರು. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪದೇ ಪದೇ ಬಂದು ಜಯಕುಮಾರ್ ಕಿಸ್ ಕೊಡು, ಕಿಸ್ ಕೊಡು ಎಂದು ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ಪತಿಗೆ ಕೂಡ ಹೇಳಿದ್ದರು. ನಂತರ ಅವರ ಪತಿ ಮಾಲೀಕನಿಗೆ ವಾರ್ನ್ ಕೂಡ ಮಾಡಿದ್ದರು. ಆದರೂ ಮನೆ ಓನರ್ ನ ಕಿಸ್ ಬೇಡುವ ಬಯಕೆ ನಿಯಂತ್ರಣಕ್ಕೆ ಬಂದಿರಲಿಲ್ಲ.

ಆದರೆ ಮೊನ್ನೆ ಇನ್ನೂ ಮುಂದುವರೆದ ಮನೆಯ ಯಜಮಾನ ಜಯಕುಮಾರ್, ಮಹಿಳೆಯ ಯಜಮಾನನಂತೆ ( ಗಂಡ ನಂತೆ) ವರ್ತಿಸಿದ್ದ. ಆಕೆ ಮನೆಯಲ್ಲಿ ಒಬ್ಬರೇ ಸೀರೆಯುಟ್ಟುಕೊಂಡು ಅಡುಗೆ ಮಾಡುತ್ತಿದ್ದಾಗ ಹಿಂಬದಿಯಿಂದ ಬಾಚಿ ಹಿಡಿದಿದ್ದ. ಆಕೆಯನ್ನು ಬಲವಂತವಾಗಿ ಹಿಡಿದು ಬಾಡಿಗೆ ಕೊಡುವುದು ಬೇಡ, ಕಿಸ್ ಕೊಡು ಸಾಕು ಎಂದು ಪೀಡಿಸಿದ್ದ. ಆಗ ಆ ಮಹಿಳೆ ಆತನನ್ನು ತಳ್ಳಿ ಹೊರಕ್ಕೆ ಓಡಿ ಬಂದಿದ್ದಳು. ನಂತರ ಪೊಲೀಸರಲ್ಲಿ ದೂರು  ದಾಖಲಿಸಿದರು. ಸದ್ಯ ಜಯಕುಮಾರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡು ಮನೆಯ ಓನರ್ ಈಗ ಜೈಲಿನ ಬಾಡಿಗೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು ಕೂತಿದ್ದಾನೆ.

Leave A Reply

Your email address will not be published.