ಯಶವಂತಪುರ- ಮಂಗಳೂರು ಹಗಲು ರೈಲಿಗೆ ವಿಶೇಷ ಆಕರ್ಷಣೆ: ಜು.7ರಿಂದ ವಿಸ್ಟಾಡೋಮ್ ಬೋಗಿ ಸೇರ್ಪಡೆ

ಕನ್ನಡಿಗರಿಗೆ ವಿಸ್ತಾಡೋಮ್ ರೈಲ್ವೇಯ ಭಾಗ್ಯ. ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಅತ್ಯಾಧುನಿಕ ಎರಡೆರೆಡು ವಿಸ್ತಾಡೋಮ್ ರೈಲ್ವೇಗೆ ಚಾಲನೆ ನೀಡಿದ ಮೋದಿ ಸರ್ಕಾರ.

 

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಸ್ಟಾಡೋಮ್‌ ಕೋಚ್‌ನಲ್ಲಿ ಕುಳಿತು ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಕಾಲ ಕಡೆಗೂ ಕೂಡಿ ಬಂದಿದೆ.

ನೈಋುತ್ಯ ರೈಲ್ವೆ ಸದರಿ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ತಲಾ ಎರಡು ವಿಸ್ಟಾಡೋಮ್‌ ಕೋಚ್‌ ಅಳವಡಿಸುತ್ತಿದ್ದು, ಜು.7ರಿಂದ ಪ್ರಯಾಣಿಕರು ಈ ವಿಸ್ಟಾಡೋಮ್‌ ಕೋಚ್‌ನಲ್ಲಿ ಕುಳಿತು ಪಶ್ಚಿಮಘಟ್ಟಗಳ ಪ್ರಕೃತಿಯ ರಮಣೀಯ ಸಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಹ್ಮಣ್ಯ ರಸ್ತೆ- ಸಕಲೇಶಪುರ ಘಟ್ಟಪ್ರದೇಶ ನಡುವಿನ 55 ಕಿ.ಮೀ. ವ್ಯಾಪ್ತಿ ಹಸಿರುಮಯ ಅರಣ್ಯ, ಜಲಪಾತಗಳು, ಸೇತುವೆಗಳ ವಿಹಂಗಮ ನೋಟವನ್ನು ಪ್ರಯಾಣಿಕರು ಸಂಚರಿಸುವಾಗ ಕಣ್ತುಂಬಿಕೊಳ್ಳಬಹುದು.

ಮೊದಲ ರೈಲು ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌ ಜು.7ರಂದು ಯಶವಂತಪುರದಿಂದ ಹೊರಡಲಿದೆ.

ಎರಡನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ ಪ್ರೆಸ್‌ಸ್ಪೆಷಲ್‌ ಜು. 8 ರಂದು ಯಶವಂತಪುರದಿಂದ ಹಾಗೂ ಮೂರನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್‌-ಯಶವಂತಪುರ ಸ್ಪೆಷಲ್‌ ಎಕ್ಸ್‌ಪ್ರೆಸ್‌ ಜು.10 ರಂದು ಯಶವಂತಪುರದಿಂದ ಹೊರಡಲಿದೆ. ಅಂತೆಯೆ ಈ ರೈಲುಗಳ ಸಂಚಾರದ ಮಾರನೇ ದಿನ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬರಲಿವೆ.

ಈ ರೈಲುಗಳ ವಿಸ್ಟಾಡೋಮ್‌ ಕೋಚ್‌ನಲ್ಲಿ ಪ್ರಯಾಣಿಸಲು ಜು.3ರಿಂದ ಮುಂಗಡ ಟಿಕೆಟ್‌ ಬುಂಕಿಂಗ್‌ಗೆ ಅವಕಾಶ ನೀಡಲಾಗಿದೆ. ಈ ವಿಸ್ಟಾಡೋಮ್‌ ಕೋಚ್‌ನ ರೈಲಿನ ಪ್ರಯಾಣಕ್ಕೆ ಶತಾಬ್ಧಿ ರೈಲಿನ ಟಿಕೆಟ್‌ ದರವನ್ನೇ ನಿಗದಿಗೊಳಿಸಲಾಗಿದೆ.

ವಿಸ್ಟಾಡೋಮ್‌ ಕೋಚ್‌ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್‌, ಪುಟ್ಟರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿವೆ.‌

Leave A Reply

Your email address will not be published.