ಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು ; ಇಂತಹಾ ಮದುವೆಗಳಲ್ಲಿ ಮಕ್ಕಳು​ ಯಾಕೆ ಮುಸ್ಲಿಂ ಆಗಿಯೇ ಮುಂದುವರಿಯಬೇಕು ? – ಕಂಗನಾ ರಾಣಾವತ್ ಪ್ರಶ್ನೆ

ಬಾಲಿವುಡ್​ನ ಸ್ಟಾರ್​ ಅಮಿರ್​ ಖಾನ್​ ಮತ್ತು ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿರುವುದು, ಈ ಬಗ್ಗೆ ಎಲ್ಲೆಲ್ಲೂ ಜನ ಮಾತನಾಡುತ್ತಿದ್ದಾರೆ. ತಮಗೆ ಅನಿಸಿದ್ದನ್ನು, ಸತ್ಯವನ್ನು ಗಟ್ಟಿಯಾಗಿ ಹೇಳುವ ಗಟ್ಟಿಗಿತ್ತಿ ನಟಿ ಕಂಗನಾ ರಣಾವತ್​ ಕೂಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು. ಇವರಿಬ್ಬರಿಗೆ ಜನಿಸಿದ ಪುತ್ರ ಆಜಾದ್​ ರಾವ್​ ಖಾನ್​ ಯಾಕೆ ಮುಸ್ಲಿಂ ಆಗಿ ಮುಂದುವರಿಯುತ್ತಿದ್ದಾನೆ ಎಂಬ ಬಗ್ಗೆ ಕಂಗನಾ ಪ್ರಶ್ನೆ ಎತ್ತಿದ್ದಾರೆ. ದೊಡ್ಡದಾಗಿ ಮಾತಾಡುವ ಸೋ ಕಾಲ್ಡ್ ಸೋಷಿಯಲಿಸ್ಟ್ ಬೃಹಸ್ಪತಿಗಳು ತುಟಿ ಬಿಚ್ಚುತ್ತಿಲ್ಲ.

 

ಈ ಕುರಿತು ಕಂಗನಾ ತಮ್ಮ ಇನ್​ಸ್ಟಾಗ್ರಾಮ್​ ಸೋರಿಯಲ್ಲಿ ಬರೆದುಕೊಂಡಿರುವುದು ವೈರಲ್​ ಆಗಿದೆ. ‘ಒಂದು ಕಾಲದಲ್ಲಿ ಪಂಜಾಬ್​ನ ಬಹುತೇಕ ಕುಟುಂಬಗಳು ಒಬ್ಬ ಮಗನನ್ನು ಸಿಖ್​ ಆಗಿ, ಇನ್ನೊಬ್ಬ ಮಗನನ್ನು ಹಿಂದು ಆಗಿ ಬೆಳೆಸುತ್ತಿದ್ದರು. ಆದರೆ ಹಿಂದು-ಮುಸ್ಲಿಂ ಅಥವಾ ಮುಸ್ಲಿಂ ಜೊತೆ ಮದುವೆಯಾದ ಯಾರಲ್ಲೂ ಈ ಟ್ರೆಂಡ್​ ಕಾಣಿಸುವುದಿಲ್ಲ ಯಾಕೆ? ಅಮಿರ್​ ಖಾನ್​ ಅವರ ವಿಚ್ಛೇದನದ ವಿಚಾರದಲ್ಲಿ ನನಗೆ ಅಚ್ಚರಿ ಆಗಿದ್ದು ಏನೆಂದರೆ, ಇಂಥ ಅಂತರ್​ಧರ್ಮೀಯ ಮದುವೆಯಲ್ಲಿ ಮಕ್ಕಳು ಮುಸ್ಲಿಂ ಆಗಿಯೇ ಮುಂದುವರಿಯುತ್ತಾರೆ ಯಾಕೆ?’ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

‘ಮಹಿಳೆ ಯಾಕೆ ಹಿಂದು ಆಗಿ ಮುಂದುವರಿಯಲು ಸಾಧ್ಯವಿಲ್ಲ. ಬದಲಾದ ಕಾಲದಲ್ಲಿ ಇದನ್ನೂ ನಾವು ಬದಲಾಯಿಸಬೇಕು. ಇದು ತುಂಬ ಹಳೆಯ ಮತ್ತು ಜಡವಾದ ಪದ್ಧತಿ. ಒಂದೇ ಕುಟುಂಬದಲ್ಲಿ ಹಿಂದುಗಳು, ಸಿಖ್​, ಬೌದ್ಧರು, ಜೈನರು ಜೊತೆಯಾಗಿ ಇರಲು ಸಾಧ್ಯ ಎಂಬುದಾದರೆ ಮುಸ್ಲಿಮರು ಕೂಡ ಜೊತೆಯಾಗಿ ಇರಲು ಯಾಕೆ ಸಾಧ್ಯವಿಲ್ಲ? ಮುಸ್ಲಿಮರ ಜೊತೆ ಮದುವೆ ಆದವರು ತನ್ನ ಮೂಲ ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು’ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ಏಕ ಮುಖ ಬೆಂಬಲಿಸುವ ಪ್ರಗತಿಪರರು ಈಗ ಅಡ್ರೆಸ್ ಗೆ ಇಲ್ಲದೆ ಮೌನವಾಗಿದ್ದಾರೆ.

ಇನ್ನು ಈ ಬಗ್ಗೆ ಅಮಿರ್​ ಖಾನ್​ ಅಥವಾ ಕಿರಣ್​ ರಾವ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ತಿಳಿದಿಲ್ಲ. ವಿಚ್ಛೇದನದ ಬಳಿಕ ಪುತ್ರ ಆಜಾದ್​ ರಾವ್​ ಖಾನ್​ನನ್ನು ಬೆಳೆಸುವ ಜವಾಬ್ಧಾರಿಯನ್ನು ಇವರಿಬ್ಬರು ಜೊತೆಯಾಗಿ ವಹಿಸಿಕೊಂಡಿದ್ದಾರೆ. ಆ ವಿಚಾರದಲ್ಲಿ ತಾವು ಪಾಲಕರಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ. ಪಾನಿ ಪೌಂಡೇಶನ್​, ಸಿನಿಮಾ ಮುಂತಾದ ಪ್ರಾಜೆಕ್ಟ್​ಗಳಲ್ಲೂ ಅಮಿರ್​ ಮತ್ತು ಕಿರಣ್​ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಇಬ್ಬರೂ ಖುಷಿಯಿಂದಲೇ ವಿಚ್ಛೇದನ ಪಡೆದುಕೊಂಡು, ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಈಗ ಕಂಗನಾ ಕಲಕಿದ ನಂತರ, ಮಕ್ಕಳನ್ನು ವಿಭಿನ್ನ ಧರ್ಮಗಳಲ್ಲಿ ಬದುಕಲು ಆ ಭಿನ್ನ ಕೋಮಿನ ದಂಪತಿಗಳು ನಿರ್ಧರಿಸಿದರೆ, ಮುಖ್ಯವಾಗಿ ಅಂದು ಅಸಹಿಷ್ಣುತೆಯ ಬಗ್ಗೆ ಮಾತಾಡಿದ ಅಮೀರ್ ಖಾನ್ ಸಹಿಷ್ಣು ಆಗಿ ಮೇಲ್ಪಂಕ್ತಿ ಹಾಕಿ ಕೊಟ್ಟರೆ ಆಗ ಆತನಿಗೊಂದು ವಿಶೇಷ ಗೌರವ ಇರುತ್ತದೆ. ನೋಡೋಣ, ಏನಾಗುತ್ತದೆ ಎಂದು.

Leave A Reply

Your email address will not be published.