ಬೆಳ್ತಂಗಡಿ : ಮಚ್ಚಿನದಲ್ಲಿ ಮನೆಗೆ ನುಗ್ಗಿ ನಿದ್ರಿಸುತ್ತಿದ್ದ ಗೃಹಿಣಿಯ ಕಾಲುಚೈನ್,ಕಪಾಟಿನಲ್ಲಿದ್ದ ನಗದು ಕಳ್ಳತನ | ಸ್ಪ್ರೇ ಸಿಂಪಡಿಸಿ ಕೃತ್ಯ ಶಂಕೆ

ಪುಂಜಾಲಕಟ್ಟೆ ಠಾಣಾ ವ್ಯಾಪ್ತಿ ಮಚ್ಚಿನ‌ ಗ್ರಾ.ಪಂಚಾಯತ್‌ಗೆ ಒಳಪಟ್ಟ ಕುದ್ರಡ್ಕ ಎಂಬಲ್ಲಿ ಮನೆಯೊಂದಕ್ಕ ನುಗ್ಗಿದ ಕಳ್ಳರು ಮನೆಯವರೆಲ್ಲರೂ ಮಲಗಿ ನಿದ್ರಿಸುತ್ತಿದ್ದಂತೆಯೇ ಗೃಹಿಣಿಯೊಬ್ಬರ ಕಾಲ್ಚೈನನ್ನೇ ತುಂಡರಿಸಿ ಕಳ್ಳತನ ನಡೆಸಲಾಗಿದೆ.ಹಾಗೂ ಕಪಾಟಿನಲ್ಲಿಟ್ಟಿದ್ದ 20 ಸಾವಿರ ರೂ.‌ನಗದು ಕೂಡ ಕಳ್ಳರು ಹೊತ್ತೊಯ್ದಿದ್ದಾರೆ.

 

ಕುದ್ರಡ್ಕ‌ ನಿವಾಸಿ ನವಾಝ್ ಕುದ್ರಡ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಸಂಬಂಧ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.

ಶನಿವಾರ ತಡ ರಾತ್ರಿ ಮನೆಯ ಹಿಂಬಾಗಿಲಿನ‌ ಚಿಲಕ ಮುರಿದ ಕಳ್ಳರು ಒಳ ಪ್ರವೇಶಿದ್ದರು. ಬಳಿಕ ಬೀಗ ಹಾಕದೇ ಇದ್ದ ಕಪಾಟು ಜಾಲಾಡಿ‌ ಅದರಲ್ಲಿದ್ದ‌ 20 ಸಾವಿರ ರೂ.‌ನಗದು ಕದ್ದೊಯ್ದಿದ್ದಾರೆ. ಅಲ್ಲೇ ಪಕ್ಕದಲ್ಲಿ ಮಲಗಿದ್ದ‌ ನವಾಝ್ ಅವರ ಸಹೋದರಿ,‌ ವಿವಾಹಿತೆ ಫಾತಿಮತ್ ಝುಹುರಾ‌ ಅವರು ಧರಿಸಿದ್ದ 16 ಗ್ರಾಂ. ಅಂದಾಜು ತೂಕದ ಬಂಗಾರದ ಕಾಲ್ಚೈನನ್ನು ಕತ್ತರಿಸಿ ಕೊಂಡೋಗಿದ್ದಾರೆ.ಈ‌ ವೇಳೆ ಮನೆಯಲ್ಲಿ ನವಾಝ್ ಅವರ ತಂದೆ ತಾಯಿ, ಒಂದು‌ರೂಮಿನಲ್ಲಿ ಅಣ್ಣ ರಿಯಾಝ್ ಅವರ ಪತ್ನಿ ಮಲಗಿದ್ದರು. ಎಲ್ಲರೂ‌ ಅವರ ಪಾಡಿಗೆ ನಿದ್ರಿಸುತ್ತಿದ್ದಂತೆ ಈ ಕಳ್ಳತನ‌ ಕೃತ್ಯ ನಡೆದಿರುವುದು ಆಶ್ಚರ್ಯ ಮೂಡಿಸಿದೆ.

ಮಗಿದ್ದವರ ಮೇಲೆ ಅಮಲು ಬರುವ ಸ್ಪ್ರೇ ಸಿಂಪಡಿಸಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಎಡಿಷನಲ್ ಎಸ್ಪಿ ಭಾಸ್ಕರ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕುಟ್ಟಿ ಎಂ.ಕೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.