ಎರಡು ಯೋನಿಯ, ಎರಡು ಗರ್ಭಕೋಶಗಳಿರುವ ಈ ಹುಡುಗಿಗೆ ತಿಂಗಳಿಗೆ ಎರಡೆರದು ಬಾರಿ ಋತುಸ್ರಾವ | ಇದೀಗ ಆಕೆ ಎರಡೂ ಗರ್ಭಕೋಶಗಳಲ್ಲೂ ಗರ್ಭವತಿ !!
ಪೆನ್ಸಿಲ್ವೇನಿಯಾ: ಈ ಚಿತ್ರದಲ್ಲಿ ಕಾಣುತ್ತಿರುವ ಯುವತಿ ವೈದ್ಯಲೋಕಕ್ಕೆ ಸವಾಲಾಗಿದ್ದಾಳೆ. ಏಕೆಂದರೆ ಇವಳಿಗೆ ಹುಟ್ಟುತ್ತಲೇ ಎರಡು ಯೋನಿ ಇದ್ದು, ಜತೆಗೆ ಎರಡು ಗರ್ಭಾಶಯವೂ ಇದ್ದು ಆಕೆ ವಿಚಿತ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾಳೆ.
ಪೆನ್ಸಿಲ್ವೇನಿಯಾದ ಫಿಲಡೆಲ್ಸಿಯ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಈಕೆ. ಜನನಪೂರ್ವದಲ್ಲಿ ಕಂಡುಬರುವ ಡಿ ಏಂಜೆಲೊ ಯುಟೇರಿನೇ ಡೈಡೆಲ್ಫಿಸ್ ಎಂಬ ಸಮಸ್ಯೆಯಿಂದ ಈಕೆ ಬಳಲುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಸಮಸ್ಯೆಗೆ ಒಳಗಾದ ಹೆಣ್ಣುಮಗುವಿಗೆ ಹುಟ್ಟಿನಿಂದಲೇ ಎರಡು ಗರ್ಭಕೋಶ, ಎರಡು ಯೋನಿ ಇದೆ. ಮಾತ್ರವಲ್ಲದೇ ತಿಂಗಳಿಗೆ ಎರಡು ಬಾರಿ ಮಾಸಿಕ ಋತುಸ್ರಾವವೂ ಆಗುವ ಕಷ್ಟ ಆಕೆಯದು. ಒಂದೇ ಸಲ ಋತುಸ್ರಾವ ಆದರೂ ಸ್ತ್ರೀಯರಿಗೆ ಕಿರಿಕಿರಿ ಆಗ್ತದೆ. ಆದರೆ ಸರಿ ಸುಮಾರು ಅರ್ಧ ತಿಂಗಳೇ ಆಕೆ ಋತು ಸಂಕ್ರಮಣ ದ ಇಕಟ್ಟಿನಲ್ಲಿ ಕಳೆಯಬೇಕಾಗಿದೆ.
ಈಕೆಗೆ ತನಗೆ ಈ ರೀತಿಯ ವಿಚಿತ್ರ ಸಮಸ್ಯೆ ಇರುವುದು 18 ವರ್ಷದವರೆಗೂ ತಿಳಿದೇ ಇರಲಿಲ್ಲ. ಪ್ರತಿ ತಿಂಗಳೂ ಎರಡು ಬಾರಿ ಮಾಸಿಕ ಋತುಸ್ರಾವ ಆಗುತ್ತಿದ್ದುದರಿಂದ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾಳೆ. ಆದರೂ ಕೂಡ ಸಮಸ್ಯೆ ಬಗೆಹರಿದಿರಲಿಲ್ಲ. ನಂತರ 18ನೇ ವಯಸ್ಸಿನಲ್ಲಿ ವೈದ್ಯರೊಬ್ಬರು ಆಕೆಯ ಈ ವಿಚಿತ್ರ ಪತ್ತೆ ಹಚ್ಚಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಈ ಸಮಸ್ಯೆಯಿಂದ ಹೆಚ್ಚು ಅನಾನುಕೂಲ ಇದ್ದು, ಲೈಂಗಿಕ ಸುಖದ ವಿಷಯದಲ್ಲಿ ಆಕೆ ಅದೃಷ್ಟವಂತಲಂತೆ. ಎರಡೆರಡು ಜನನಾಂಗ ಇರುವ ಕಾರಣ ಆಕೆ ಹೆಚ್ಚಿನ ದೇಹ ಸುಖ ಪಡೆಯುತ್ತಿದ್ದಾಳೆ ಎನ್ನುವುದು ಆಕೆಯ ಹೇಳಿಕೆ.
ಈಕೆ ಇದೀಗ ಬೆಳಕಿಗೆ ಬರಲು ಕಾರಣ, ಒಂದು ಗರ್ಭಕೋಶದ ಮೂಲಕ ಗರ್ಭವತಿಯಾಗಿದ್ದಾಳೆ. ಆಕೆ ಗರ್ಭವತಿ ಆಗಿದ್ದರೂ ಇನ್ನೊಂದು ಗರ್ಭಕೋಶದ ಮೂಲಕ ಈಕೆಗೆ ಋತುಸ್ರಾವವಾಗುತ್ತಿತ್ತು. ಅದೇ ಸಮಯದಲ್ಲಿ ಎರಡನೆಯ ಗರ್ಭಕೋಶದ ಮೂಲಕ ಕೂಡಾ ಆಕೆ ಗರ್ಭ ಧರಿಸಿದ್ದು ಆತಂಕ ಉಂಟುಮಾಡಿದೆ.