ಉಪ್ಪಿನಂಗಡಿ ಆಟೋ ಕಳವು ಪ್ರಕರಣ: ಇಬ್ಬರ ಬಂಧನ

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಟೋ ರಿಕ್ಷಾ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ಬಿಳಿನೆಲೆ ಸಮೀಪದ ಬಿಳಿನೆಲೆ ಬೈಲು ನಿವಾಸಿ ಸಂತೋಷ್(18 ವ) ಹಾಗೂ ಕೇರಳದ ಪಾತೂರು ಗ್ರಾಮದ ಸೀಂತೂರು ನಿವಾಸಿ 19 ವರ್ಷದ
ಯತಿರಾಜ್ ಕಳವು ಆರೋಪದಲ್ಲಿ ಬಂಧನಕ್ಕೊಳಗಾದವರು.

ಉಪ್ಪಿನಂಗಡಿಯ ನಟ್ಟಿಬೈಲ್ ನಿವಾಸಿ ನವೀನ್ ಎಂಬವರು ತನ್ನ ಮನೆಯ ಶೆಡ್ ನಲ್ಲಿ ಜೂ.18ರಂದು ತನ್ನ ಅಟೋ ರಿಕ್ಷಾವನ್ನು ನಿಲ್ಲಿಸಿದ್ದರು. ಆದರೆ ಅದು ಜೂ.19ರಂದು ಬೆಳಗ್ಗೆ ಕಳವಾದ ಬಗ್ಗೆ‌ ಬೆಳಕಿಗೆ ಬಂದಿತ್ತು. ಕೆಲ ದಿನಗಳ ಬಳಿಕ ಕಳವಾದ ರಿಕ್ಷಾ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಪತ್ತೆಯಾಗಿತ್ತು ಬಳಿಕ ಅದನ್ನು ಪೊಲೀಸರು ವಶಪಡೆದುಕೊಂಡಿದ್ದರು.

ಆ ಸಂದರ್ಭ ಅದನ್ನು ಚಲಾಯಿಸಿಕೊಂಡು ಬಂದವ ಈ ರಿಕ್ಷಾವನ್ನು ತನ್ನ ಬಿಳಿನೆಲೆಯ ಗೆಳೆಯನಿಂದ ಪಡೆದುಕೊಂಡು ಆಸ್ಪತ್ರೆಗೆ ಬಂದಿದ್ದೆ ಎಂದಿದ್ದ. ಈ ಮಾಹಿತಿಯನ್ನಾಧರಿಸಿ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave A Reply

Your email address will not be published.