ತೆಂಗಿನಕಾಯಿ ಬಿದ್ದು ಮಗು ಸಾವು | ಮನೆ ಎದುರು ಮಗುವಿಗೆ ಊಟ ಮಾಡಿಸುತ್ತಿದ್ದಾಗ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ
ಮರದ ಮೇಲಿಂದ ತಲೆ ಮೇಲೆ ತೆಂಗಿನಕಾಯಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ 11 ತಿಂಗಳ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಹಿರೇಕೆರೂರ ಸಮೀಪ ಹಂಸಭಾವಿ ಗ್ರಾಮದಲ್ಲಿ ನಡೆದಿದೆ.
ಹಂಸಭಾವಿಯ ಮಲ್ಲಿಕಾರ್ಜುನ ವಾಲ್ಮೀಕಿ ಹಾಗೂ ಮಾಲಾ ದಂಪತಿಯ 11 ತಿಂಗಳ ಮಗು ತನ್ವೀತ್ ಮೃತಪಟ್ಟ ಮಗು.
ಮನೆ ಎದುರು ತಾಯಿ ತನ್ನ ಮಗ ತನ್ವೀತ್ನಿಗೆ ಊಟ ಮಾಡಿಸುತ್ತಿದ್ದ ಸಂದರ್ಭ ಮರದ ಮೇಲಿಂದ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಗುವನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.