ತೋಟಕ್ಕೆ ಹೋದ ಕಾರ್ಮಿಕನಿಗೆ ಕಾಡು ಹಂದಿ ತಿವಿದು ಸಾವು
ಕೃಷಿಕರೊಬ್ಬರು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ತಿವಿದು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕಿರಂಗದೂರು ಎಂಬಲ್ಲಿ ನಡೆದಿದೆ.
ತೋಟಕ್ಕೆ ತೆರಳಿದ್ದ ಎಸ್.ಎಲ್.ಪೂವಯ್ಯ ಎಂಬವರ ಪುತ್ರ ಕುಶಾಲಪ್ಪ ಎಂಬವರೇ ಕಾಡುಹಂದಿಯ ದಾಳಿಗೆ ಬಲಿಯಾದವರು.ಅವರು ಮನೆಕಡೆ ಬಾರದಿರುವುದನ್ನು ಮನಗಂಡು ಪತ್ನಿ ಅವರ ಮೊಬೈಲ್ ಗೆ ಕರೆಮಾಡಿದ್ದು,ಆದರೆ ಕರೆ ಸ್ವೀಕರಿಸದ ಕಾರಣ ಹುಡುಕಿಕೊಂಡು ತೋಟದ ಕಡೆಗೆ ಹೋದಾಗ ತೊಡೆ ಹಾಗೂ ಮೈಮೇಲೆ ಗಂಭೀರ ಗಾಯಗೊಂಡು ನಿರ್ಜೀವ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಕಾಡು ಹಂದಿಗಳ ದಾಡೆಗಳು ನಾಳೆ ಹಾಕಿದ ಕತ್ತಿ ಗಳಂತೆ ಸಕತ್ತು ಶಾರ್ಪ್ ಆಗಿದ್ದು, ಸಾಧಾರಣ ಚಿಕ್ಕ ಗಾತ್ರದ ಹಂದಿ ತಿವಿದರೂ ಮಾರಣಾಂತಿಕ ಗಾಯವಾಗುತ್ತದೆ. ಅಲ್ಲಿ ಹೊಟ್ಟೆಯ ಭಾಗಕ್ಕೆ ತಿವಿತ ಉಂಟಾಗಿ ರಕ್ತಸ್ರಾವ ಏರ್ಪಟ್ಟು ವ್ಯಕ್ತಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.