ಮದುವೆಯಾಗಿಯೂ ದೂರವಾದ ಫೇಸ್ ಬುಕ್ ಪ್ರೇಮಿಗಳು..ಲವ್ ಬರ್ಡ್ಸ್ ಜೀವನವು ನಾನೊಂದು ತೀರಾ-ನೀನೊಂದು ತೀರಾ ಆಗಲು ಕಾರಣವೇನು?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ ಹುಟ್ಟಿ, ಒಬ್ಬರನ್ನೊಬ್ಬರು ಮದುವೆಯಾಗುವ ಸನ್ನಿವೇಶಗಳ ಸದಾ ಪ್ರಚಲಿತದಲ್ಲಿದೆ.ಆ ಪ್ರೀತಿ ಎಷ್ಟು ದಿನದ ಮಟ್ಟಿಗೆ ಶಾಶ್ವತ ಎಂಬುವುದುದಕ್ಕೆ ಕೆಲವು ಉದಾಹರಣೆಗಳಿವೆ.ಕೆಲ ಪ್ರಕಾರಣಗಳಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾದರೆ, ಇಲ್ಲೊಂದು ಪ್ರಕರಣದಲ್ಲಿ ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

 

ಆ ಜೋಡಿಯು ಮದುವೆಯಾಗಿಯೂ ನಾನೊಂದು ತೀರಾ, ನೀನೊಂದು ತೀರಾ ಎಂಬಂತೆ ದೂರವಾಗಿದ್ದಾರೆ.ಫೇಸ್ಬುಕ್ ನಲ್ಲಿ ಪರಿಚಯವಾದ ಹದಿನೇಳರ ಹರೆಯದ ಯುವಕನನ್ನು ಇಪ್ಪತ್ತರ ಯುವತಿಯೋರ್ವಳು ವಿವಾಹವಾಗಿದ್ದಾಳೆ,ವಿವಾಹದ ಸುದ್ದಿ ತಿಳಿದು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಯುವತಿಯ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ.ಇದಕ್ಕೆಲ್ಲಾ ಗಂಭೀರವಾದ ಕಾರಣವೆಂದರೆ ಯುವಕ ಅಪ್ರಾಪ್ತ.ಈ ಘಟನೆ ನಡೆದಿದ್ದು ಮಾತ್ರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿಸಿಲೇ ಹಳ್ಳಿ ಗ್ರಾಮದಲ್ಲಿ.

ಘಟನೆ ವಿವರ :ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ಬೆಂಗಳೂರು ಮೂಲದ 20 ವರ್ಷದ ಯುವತಿಯು ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಯುವಕನ ಜೊತೆ ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿ,ಒಂದೆರಡು ವರ್ಷಗಳ ಸ್ನೇಹವು ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ವಿವಾಹವಾಗಲು ನಿರ್ಧರಿಸಿದ್ದರು. ಈ ವಿವಾಹಕ್ಕೆ ಹುಡುಗಿ ಮನೆಯವರಿಂದ ಆಕ್ಷೇಪವಿದ್ದು ಫೋಷಕರು ಮದುವೆಗೆ ವಿರೋಧಿಸಿದ್ದರು.ಬಳಿಕ ಹುಡುಗನ ತಾಯಿ ಸಂಬಂಧಿಕರ ಜೊತೆ ಸೇರಿ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಇಬ್ಬರಿಗೂ ಮದುವೆ ಮಾಡಿದ್ದರು.

ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದ್ದು, ಸಖರಾಯಪಟ್ಟಣ ಪೋಲೀಸರೊಂದಿಗೆ,ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನ ವಶಕ್ಕೆ ಪಡೆದು ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೋನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ.

ಸಖರಾಯಪಟ್ಟಣ ಪೊಲೀಸರು ವಿಷಯವನ್ನು ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ಬಾಲಕನಿಗೆ ತಿಳಿ ಹೇಳಿ ಪೋಷಕರ ಮನೆಗೆ ಕಳಿಸಿದ್ದು, ಸದ್ಯ ಯುವತಿಯನ್ನು ಜಿಲ್ಲೆಯ ಸಾಧ್ವಾರ ಕೇಂದ್ರದಲ್ಲಿ ಬಿಡಲಾಗಿದೆ.ಯುವಕನಿಗೆ ಪ್ರಾಯ ತುಂಬಿದ ಮೇಲೆ ಇಬ್ಬರನ್ನೂ ಜೊತೆಗೆ ಕಳುಹಿಸಿ ಕೊಡುವರೇ ಎಂಬುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.