ಕೇರಳದಲ್ಲಿ ಕನ್ನಡ ಕೊನೆಯುಸಿರೆಳೆಯುವಂತೆ ಮಾಡಿದ ಪಿಣರಾಯ್ ವಿಜಯನ್ ಸರಕಾರ | ಹಲವು ಊರುಗಳ ಹೆಸರು ಕನ್ನಡದಿಂದ ಮಲಯಾಳಂಗೆ
ಕಾಸರಗೋಡು : ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಕನ್ನಡದಲ್ಲಿರುವ ಹಲವು ಊರುಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಕೇರಳ ರಾಜ್ಯದಲ್ಲಿ ಕನ್ನಡ ಹೆಸರುಗಳ ಊರುಗಳು ಮಲಯಾಳೀಕರಣ ಆಗುತ್ತಿದ್ದು, ಇದರ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧೂರು ಇನ್ನು ಮಧುರಮ್ ,ಕಾರಡ್ಕ -ಕಡಗಮ್,ಪಿಳಿಕುಂಜೆ-ಪಿಳಿಕುನ್ನಿ,ಮಂಜೇಶ್ವರ-ಮಂಜೇಶ್ವರಮ್,ಕುಂಬಳೆ-ಕುಂಬ್ಳಾ,ನೆಲ್ಲಿಕುಂಜ-ನೆಲ್ಲಿಕುನ್ನಿ,ಮಲ್ಲ-ಮಲ್ಲಮ್,ಬೇದಡ್ಕ-ಬೆಡಗಮ್,ಆನೆಬಾಗಿಲು-ಆನೆವಾಗಿಲ್,ಹೊಸದುರ್ಗ-ಪುದಿಯ ಕೋಟ,ಸಸಿಹಿತ್ಲು-ಶೈವಲಮ್ ಆಗಲಿದೆ.