ಆಕೆ ದೇಶಕ್ಕೆ ಗೆದ್ದು ತಂದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 28 ಚಿನ್ನದ ಪದಕ..ಆದರೀಗ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ
ಡೆಹ್ರಾಡೂನ್: ಒಮ್ಮೆ ಜೋರಾಗಿ ಹೇಳಿಬಿಡಿ. ಮೇರಾ ದೇಶ ಮಹಾನ್ ಎಂದು. ಸುತ್ತಮುತ್ತಲು ಇರುವವರಿಗೆ ಕೇಳಿಸುವಷ್ಟು ಜೋರಾಗಿ. ಆಗಲಾದರೂ ನಮ್ಮ ವ್ಯವಸ್ಥೆಗೆ ಕೇಳಿಸುತ್ತಾ ನೋಡೋಣ.
ಇದು ಮಹಾನ್ ಎಂದು ನಾವು ಸುಮ್ಮ ಸುಮ್ಮನೇ ನಮ್ಮನ್ನು ನಾವು ಹೊಗಳಿಕೊಳ್ಳುವ ದೇಶದ ಕಥೆ. ಅಲ್ಲಿ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ
ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆ. ವರ್ಷಗಟ್ಟಲೆ ತನ್ನ ವಿಕಲ ಅಂಗಗಳ ಜತೆ ಬದುಕುತ್ತಾ, ಕ್ರೀಡಾ ಸಾಧನ ಮೆರೆದ ಮಹಿಳೆ ಇವತ್ತು ಕಣ್ಣೀರು ಹಾಕಿಕೊಂಡು ರಸ್ತೆಬದಿಯಲ್ಲಿ ನಿಂತಿದ್ದಾಳೆ.
ದಿಲ್ರಾಚ್ ಕೌರ್ 2005ರಲ್ಲಿ ತನ್ನ ಕ್ರೀಡಾ ಜೀವನ ಶುರು ಮಾಡಿ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ ದಿಟ್ಟ ಹೆಂಗಸು. ಕಷ್ಟಗಳ ಮಧ್ಯೆಯೇ ತನ್ನ ಬದುಕಿನಲ್ಲಿ ಛಲವನ್ನು ಬೆಳೆಸಿಕೊಂಡು, ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ಬರೀ ಭಾಗವಹಿಸಿದ್ದು ಮಾತ್ರವಲ್ಲ, ಗೆಲ್ಲಲೆಂದೆ ಭಾಗವಹಿಸಿದ್ದಳು.
ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ, ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಇದೀಗ ಜೀವನ ನಿರ್ವಹಣೆಗೆ ಕಷ್ಟಪಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಬಿಸ್ಕತ್ ಚಿಪ್ಸ್ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.