ಸವಾರರೇ ಬೆಂಗಳೂರಿನಲ್ಲಿ ವಾಹನ ಚಲಾಯಿಸುವಾಗ ಎಚ್ಚರ…ಎಚ್ಚರ ತಪ್ಪಿದರೆ ಕುತ್ತಿಗೆ ಸೀಳಲಿದೆ ಯಮರೂಪದ ಗಾಳಿಪಟದ ದಾರ
ಬೆಂಗಳೂರು, ರಾಜ್ಯದ ರಾಜಧಾನಿ.ದೇಶದ ವಿವಿದೆಡೆಗಳಿಂದ ಜನರು ವಾಹನಗಳಲ್ಲಿ ಬರುತ್ತಾ ಸದಾ ರಸ್ತೆ ತುಂಬೆಲ್ಲಾ ವಾಹನಗಳು ತುಂಬಿ ತುಳುಕುತ್ತವೆ. ಈ ನಡುವೆ ಅನೇಕ ಅಪಘಾತಗಳು, ರಸ್ತೆ ನಡುವೆ ಗುಂಡಿಗಳು, ಬೃಹದಾಕಾರದ ಬಸ್ಸು ಗಳು.ಎಲ್ಲಿ ಯಾವ ರೀತಿ ಯಮ ಕಾದಿರುತ್ತಾನೋ ಎಂದು ಯಾರೂ ಊಹಿಸಲು ಅಸಾಧ್ಯ.ಇದೆಲ್ಲದರ ನಡುವೆ ಗಾಳಿಪಟದ ದಾರ ದಿಂದಾಗಿ ಸವಾರನೊಬ್ಬನ ಕತ್ತು ಸೀಳಿದೆ.
ಹೌದು ದ್ವಿಚಕ್ರ ವಾಹನದಲ್ಲಿ ಬ್ಯಾಂಕ್‌ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಗಾಳಿಪಟ ದಾರ ಕತ್ತು ಸೀಳಿರುವ ಘಟನೆ ಆಡುಗೋಡಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗಾಯಳು ವ್ಯಕ್ತಿ ಈ ಕುರಿತು ವಿಡಿಯೋ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾನೆ.ದಾರವು ಕುತ್ತಿಗೆ ಯನ್ನು ಸೀಳಿ, ಇನ್ನೇನು ಇನ್ನೇನು ತಲೆ ಬೇರ್ಪಡಬೇಕಿತ್ತು ಎನ್ನುವಷ್ಟರಲ್ಲಿ ಆ ವ್ಯಕ್ತಿ ಬಹಳ ಚಾನಾಕ್ಷತನದಿಂದ ಬಚಾವ್ ಆಗಿದ್ದಾನೆ.
ಈ ಬಗ್ಗೆ ಆಸ್ಪತ್ರೆಯಲ್ಲಿ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ದಯವಿಟ್ಟು ನಿಲ್ಲಿಸಿ, ನಾನು ಬ್ಯಾಂಕ್ ಗೆಂದು ಬೈಕ್ ನಲ್ಲಿ ಹೋಗುತ್ತಿರಬೇಕಾದರೆ ದಾರವು ಕುತ್ತಿಗೆಯನ್ನು ಸೀಳಿತು, ನಾನು ದಾರವನ್ನು ಕೈಯಿಂದ ಎಳೆದು ತುಂಡರಿಸಿದ ರಭಸಕ್ಕೆ ಎರಡೂ ಬೆರಳುಗಳು ತುಂಡಾಗಿದೆ, ಎಚ್ಚರ ತಪ್ಪಿದರೆ ನನ್ನ ತಲೆ ಇರುತ್ತಿರಲಿಲ್ಲ ಈ ಬಗ್ಗೆ ಗಮನ ಹರಿಸಿ, ಅಮಾಯಕ ಜೀವಗಳ ಬಲಿಗೆ ಕಾರಣವಾಗದಿರಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಬೆಂಗಳೂರಿಗರ ಮೇಲೆ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.