ಶಾಲೆಗಳನ್ನು ಪ್ರಾರಂಭಿಸಲು ತಜ್ಞರ ಸೂಚನೆ | ಮೊದಲ ಹಂತದಲ್ಲಿ ಶುರುವಾಗಲಿವೆ ಸರ್ಕಾರಿ ಶಾಲೆಗಳು

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲ ಹಂತಗಳಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ತಯಾರಿ
ಆರಂಭಿಸುವಂತೆ ತಜ್ಞರ ಸಮಿತಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ 50 ಕ್ಕಿಂತ ಕಡಿಮೆ ಮಕ್ಕಳಿರುವ 22 ಸಾವಿರ ಸರ್ಕಾರಿ ಶಾಲೆಗಳಿವೆ. ಅವುಗಳಲ್ಲಿ 5-6 ಕೊಠಡಿಗಳಿದ್ದು ಒಂದೊಂದು ಕೊಠಡಿಗಳಲ್ಲಿ 8-10 ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವಂತೆ ಸೂಚಿಸಲಾಗಿದೆ. ಹಾಗೂ ದೈಹಿಕ ಅಂತರ, ಮಾಸ್ಕ್ ಕಡ್ಡಾಯವಾಗಿದ್ದು, ಸುರಕ್ಷಿತವಾಗಿ ಶಾಲೆಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಿದೆ.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ದೈಹಿಕ ಅಂತರ ಪಾಲನೆ ಕಷ್ಟ. ಅಲ್ಲದೇ ಬಹುತೇಕ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಅವಲಂಬಿಸಿರುವುದರಿಂದ ಹಳ್ಳಿಗಳಲ್ಲಿ ಆನ್ ಲೈನ್ ಕ್ಲಾಸ್ ಸೌಲಭ್ಯವಿಲ್ಲ ಅಲ್ಲದೇ ಭೌತಿಕ ತರಗತಿ ಹೊರತಾಗಿ ಸೌಲಭ್ಯಗಳಿಲ್ಲದಿರುವುದರಿಂದ ಆ ಮಕ್ಕಳಿಗೆ ಬೇರೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ
ದೃಷ್ಟಿಯಿಂದ ಸುರಕ್ಷಿತಾ ಕ್ರಮ ಕೈಗೊಂಡು ಶಾಲೆಗಳನ್ನು ಆರಂಭಿಸುವಂತೆ ಸೂಚಿಸಿದ್ದಾರೆ.
ಆನ್ ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಗ್ಗಲಿದೆ. ಆನ್ಲೈನ್ ವ್ಯವಸ್ಥೆ ಯಾವತ್ತಿಗೂ ಸಾಂಪ್ರದಾಯಿಕ ಸ್ಕೂಲಿಂಗ್ ಮಾದರಿಗೆ ಸಮನಾಗಲಾರವು ಎನ್ನುವುದು ತಜ್ಞರ ಅಭಿಮತ. ಮುಖ್ಯವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿ ದುಡಿಯಲು ಹೊರಟಿರುವುದು ಸರಕಾರದ ಗಮನಕ್ಕೆ ಬಂದಿದೆ. ಅಲ್ಲದೆ ಹೆಣ್ಣುಮಕ್ಕಳನ್ನು ಬಾಲ್ಯವಿವಾಹಕ್ಕೆ ತಳ್ಳಲಾ ಕೂಡಾ ಅಲ್ಲಲ್ಲಿ ಗೋಚರಿಸಿದೆ. ಆದುದರಿಂದ ಶಾಲೆಯೊಂದನ್ನು ತೆರೆದರೆ ಮತ್ತೆ ವಿದ್ಯಾರ್ಥಿಗಳ ಬದುಕು ಯಥಾಸ್ಥಿತಿಗೆ ಬರುತ್ತದೆ ಎನ್ನುವುದು ಎಲ್ಲ ತಜ್ಞರ ಅಭಿಪ್ರಾಯ.