‘ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ಓಕೆ ನಾ, ನಾಟ್ ಓಕೆ ನಾ ? ‘ ಆ ಪ್ರಸಿದ್ಧ ನಿರ್ದೇಶಕ ಅಪ್ಪನಿಗೆ ಮಗಳು ಕೇಳಿದ ಪ್ರಶ್ನೆಗೆ ಅಪ್ಪ ಏನುತ್ತರ ಕೊಟ್ರು ಗೊತ್ತಾ ?!
ಮುಂಬೈ: ಮದುವೆಗೂ ಮುನ್ನ ಸೆಕ್ಸ್ ನಡೆಸಿದ್ರೆ, ನೀವು ನನ್ನ ಬಗ್ಗೆ ಏನೂ ಯೋಚಿಸುತ್ತೀರಿ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಅವರ ಪುತ್ರಿ ಆಲಿಯಾ ಪ್ರಶ್ನೆ ಮಾಡಿದ್ದಾಳೆ.
ಅನುರಾಗ್ ಕಶ್ಯಪ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಲಿಯಾ ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಮದುವೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಕೇಳಿದ್ದಾಳೆ.
ಮಗಳ ಪ್ರಶ್ನೆಗೆ ಉತ್ತರಿಸಿರುವ ಅನುರಾಗ್ ಕಶ್ಯಪ್, ” ಇದೆಂತಹ ಪ್ರಶ್ನೆ ಈಗ ? 80ರ ದಶಕದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳುತ್ತಿದ್ದೀವಿ. ಈ ಪ್ರಶ್ನೆಯಿಂದ ಮುಂದೆ ಹೋಗೋಣ ” ಎಂದು ಉತ್ತರ ನೀಡಿದ್ದಾರೆ.
” ನಾವು ಕಾಲೇಜಿನಲ್ಲಿದ್ದಾಗ ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇವು. ನಾವು ಬೇರೆಯವರಿಗೆ ಈ ಬಗ್ಗೆ ಉಪದೇಶ ಸಹ ನೀಡುವ ಪ್ರಯತ್ನ ಮಾಡುತ್ತಿದ್ದೆವು.” ಎಂದು ಆಕೆಯ ತಂದೆ ಅನುರಾಗ್ ಹೇಳಿದ್ದಾರೆ
ಆಗ ಮಗಳು ಆಲಿಯ ಮತ್ತೆ ಕೆಣಕಿ ಕೇಳಿದಂತೆ ಕೇಳಿದ್ದಾಳೆ. “
ಹಾಗಾದ್ರೆ, ಮದುವೆಗೆ ಮುನ್ನ ಸೆಕ್ಸ್ ನಾರ್ಮಲ್ ನಾ? ” ಆಕೆ ಮರು ಪ್ರಶ್ನೆ ಹಾಕಿದ್ದಾಳೆ.
“ಸದ್ಯ ಸಮಯ ಸಾಕಷ್ಟು ಬದಲಾಗಿದೆ. ಈ ವೇಳೆ ಇಂತಹ ಪ್ರಶ್ನೆಗಳು ಅವಶ್ಯ ಅಲ್ಲ” ಎಂದು ಅನುರಾಗ್ ಕಶ್ಯಪ್ ಮಾತು ಬದಲಿಸಿದ್ದಾರೆ. ಒಟ್ಟಾರೆ ಸೆಕ್ಸ್ ಅನ್ನುವುದು ಬಾಲಿವುಡ್ ಅಂಗಳದಲ್ಲಿ ತುಂಬಾ ಕಾಮನ್ ಎಂದು ಅನುರಾಗ್ ಹೇಳಿದ್ದಾರೆ. ಅಪ್ಪನ ಮಾತು ಕೇಳಿ ಮಗಳಿಗೆ ಖುಷಿ ಆಯಿತ ಗೊತ್ತಿಲ್ಲ.
ಮಗಳು ಪ್ರಶ್ನೆ ಏನೋ ಕೇಳಿದ್ದಾಳೆ. ಅಪ್ಪ ಉತ್ತರ ಕೂಡಾ ನೀಡಿದ್ದಾಳೆ. ಆದ್ರೆ ಯಾರ ಜತೆ ಸೆಕ್ಸ್ ಮಾಡುವುದು ಮದ್ವೆಗೆ ಮುಂಚೆ ಎಂದು ಮಗಳು ಕೇಳಿಲ್ಲ! ಮದುವೆ ಆಗುವ ಹುಡುಗನ ಜತೆಗಾ ಅಥವಾ ಬೇರೆಯವರ ಜತೆಗಾ ಎಂಬುದು ಸ್ಪಷ್ಟವಿಲ್ಲ.