ಯುವ ವಿವಾಹಿತ ವೈದ್ಯೆ ಆತ್ಮಹತ್ಯೆ | ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಯಿತು ಆ ಜೀವ

ಕೊಲ್ಲಂ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಕಂಗೆಟ್ಟ 24 ವರ್ಷದ ವಿವಾಹಿತ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ ದುರ್ಘಟನೆ ನಡೆದಿದೆ.

 

ಕೇರಳದ ಕೊಲ್ಲಂನ ಗಂಡನ ಮನೆಯಲ್ಲಿ ವಿಸ್ಮಯ ಎನ್ನುವ ಈ ವೈದ್ಯೆ ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಗಂಡ ಕಿರಣಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಹೆಂಡತಿ ವೈದ್ಯೆ. ಚಿನ್ನದ ಮೊಟ್ಟೆ ಇಡುವ ಕೋಳಿ. ಬದುಕಿನಲ್ಲಿ ಬೇಕಾದಷ್ಟು ದುಡ್ಡು ಮಾಡಬಹುದು. ಹಾಗಿದ್ದರೂ ಗಂಡ ಮನೆಯವರು ಕಾರು ನೀಡುವಂತೆ ಆಗಾಗ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ತಮ್ಮ ಸೋದರ ಸಂಬಂಧಿಗೆ ವಿಸ್ಮಯ ಮಾಹಿತಿ ರವಾನಿಸಿದ್ದರು.
ಈ ಕುರಿತ ವಾಟ್ಸಪ್ ಚಾಟ್ ಈಗ ವೈರಲ್ ಆಗಿದೆ. ಇದರಲ್ಲಿ ‘ಇದು ನನ್ನ ಕೊನೆ ಫೋಸ್ಟ್ ಕೂಡ ಆಗಬಹುದು’ ಎಂದು ವೈದ್ಯೆ ವಿಸ್ಮಯ ಅವರಲ್ಲಿ ಹೇಳಿಕೊಂಡಿದ್ದಾರೆ.

ಆಕೆಗೆ ವರದಕ್ಷಿಣೆಯಲ್ಲಿ ಮನೆಯಲ್ಲಿ ಕೊಟ್ಟ ಕಾರು ಕ್ವಾಲಿಟಿ ಇಲ್ಲ.ಎಂದು ಆತ ದಿನವೂ ನಿಂದಿಸಿ ಹೊಡೆಯುತ್ತಿದ್ದ. ಮನೆಗೆ ಬಂದರೆ ಹೊಡೆಯುವುದು, ಕೆಳಕ್ಕೆ ಬಿದ್ದರೆ ಮುಖಕ್ಕೆ ಒದೆಯುತ್ತಿದ್ದ. ಗಂಡ ಕಿರಣಕುಮಾರ್ ಆಗಾಗ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸೋದರ ಸಂಬಂಧಿಗೆ ವಿಸ್ಮಯ ಮಾಹಿತಿ ರವಾನಿಸಿದ್ದರು. ಈ ಕುರಿತ ವಾಟ್ಸಪ್ ಚಾಟ್ ಈಗ ವೈರಲ್ ಆಗಿದೆ. ಇದರಲ್ಲಿ ಇದು ನನ್ನ ಕೊನೆ ಪೋಸ್ಟ್ ಕೂಡ ಆಗಬಹುದು’ ಎಂದು ಹೇಳಿಕೊಂಡಿದ್ದಾರೆ.

ವಿಸ್ಮಯ, ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. 2020 ರಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ ಎಸ್. ಕಿರಣಕುಮಾರ್ ಮದುವೆಯಾಗಿದ್ದರು.

Leave A Reply

Your email address will not be published.