ಉಡುಪಿ ಸೇರಿ 6 ಜಿಲ್ಲೆಗಳು ಅನ್ ಲಾಕ್

ಉಡುಪಿ: ಇಳಿಮುಖವಾಗುತ್ತಿರುವ ಪಾಸಿಟಿವಿಟಿ ರೇಟ್ ಗಮನಿಸಿ ಉಡುಪಿ ಜಿಲ್ಲೆಯನ್ನು ಅನ್ ಲಾಕ್ ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಲಾಗಿದೆ. ಹಾಗಾಗಿ ಮತ್ತೆ 6 ಜಿಲ್ಲೆಗಳು ಈಗ ನಿರಾಳ. ಹಾಗಾಗಿ ಈಗ ಒಟ್ಟು 23 ಜಿಲ್ಲೆಗಳಿಗೆ ಈಗ ಬಿಡುಗಡೆ ಭಾಗ್ಯ.

ಉಡುಪಿ ಸೇರಿದಂತೆ ಬೆ.ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಕೂಡ ರಿಲ್ಯಾಕ್ಸ್ ನೀಡಲಾಗಿದೆ.
ಮಂಗಳವಾರದಿಂದ ಜಿಲ್ಲೆಯಲ್ಲಿ ಸಂಜೆ 5ರವರೆಗೆ ಎಲ್ಲ ಬಗೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲಿ ಏನಿರುತ್ತೆ ಏನು ಇರಲ್ಲ ?

ಜಿಲ್ಲೆಯಾದ್ಯಂತ ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 5 ರವರೆಗೆ ಕಟ್ಟುನಿಟ್ಟಿನ ರಾತ್ರಿ ಕರ್ಪ್ಯೂ.

ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕಟ್ಟುನಿಟ್ಟಿನ ವಾರಾಂತ್ಯ ಕರ್ಪೂ.

ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರವನ್ನು ಆಸನ ಸಾಮರ್ಥ್ಯದ ಶೇ.50ರಷ್ಟು ಮಾತ್ರ ತುಂಬುವಂತೆ, ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಕಾರ್ಯನಿರ್ವಹಿಸಲು ಅನುಮತಿ.

ಯಾವುದೇ ಬೇಧವಿಲ್ಲದೇ (ಅಗತ್ಯ-ಅಗತ್ಯವಿಲ್ಲದ) ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತೆರೆಯಲು ಅನುಮತಿ. ಆದರೆ ಯಾವುದೇ ಹವಾನಿಯಂತ್ರಿತ ಅಂಗಡಿಗಳು, ವಾಣಿಜ್ಯ ಸಂಕೀರ್ಣ, ಮಾಲ್‌ಗಳ ಕಾರ್ಯ ನಿರ್ವಹಣೆಗೆ ಅನುಮತಿ ಇರುವುದಿಲ್ಲ.

ಜನರು ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಲು ಎಲ್ಲಾ ವಸ್ತುಗಳ ಹೋಮ್ ಡೆಲಿವರಿ ಸೇವೆಗೆ ದಿನದ 24 ಗಂಟೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅವಕಾಶ ನೀಡಲಾಗಿದೆ.

ಹವಾನಿಯಂತ್ರಣ ವ್ಯವಸ್ಥೆ ಇಲ್ಲದೇ ಹೊಟೇಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಶೇ.50 ಸಾಮರ್ಥ್ಯ ದೊಂದಿಗೆ ಅವಕಾಶ. ಲಾಡ್ಜ್ ಹಾಗೂ ರೆಸಾರ್ಟ್‌ಗಳಿಗೂ ಶೇ.50 ಸಾಮರ್ಥ್ಯ ದೊಂದಿಗೆ ಅವಕಾಶವಿದ್ದು, ಪಬ್‌ಗಳಿಗೆ
ಶೇ.50 ಸಾಮರ್ಥ್ಯ ದೊಂದಿಗೆ ಅವಕಾಶವಿದ್ದು, ಪಬ್‌ಗಳಿಗೆ ಅನುಮತಿ ಇರುವುದಿಲ್ಲ.

ಉತ್ಪಾದನಾ ಘಟಕಗಳು, ಕೈಗಾರಿಕಾ ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲು ಅನುಮತಿ ಇದೆ. ಆದರೆ ಉಡುಪಿ ತಯಾರಿಕಾ ಘಟಕಗಳು ತಮ್ಮ ಸಾಮರ್ಥ್ಯದ ಶೇ.30ರಷ್ಟು ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯಾಚರಿಸ ಬೇಕು.

ಕಟ್ಟಡ ನಿರ್ಮಾಣ ಹಾಗೂ ದುರಸ್ಥಿಗೆ ಅವಕಾಶವಿದೆ. ಅದಕ್ಕೆ ಸಂಬಂಧಿಸಿದ ಅಂಗಡಿಗಳೂ ಬೆಳಗ್ಗೆ 5 ಸಂಜೆ6ರವರೆಗೆ ಕಾರ್ಯಾಚರಿಸ ಬಹುದು. ವಾಕಿಂಗ್ ಮತ್ತು ಜಾಗಿಂಗ್‌ಗೆ ಉದ್ಯಾನವನಗಳು ಬೆಳಗ್ಗೆ 5ರಿಂದ ಸಂಜೆ 6ರವರೆಗೆ ತೆರೆದಿಡಬಹುದು. ಜಿಮ್‌ಗಳಿಗೂ ಶೇ.50 ಸಾಮರ್ಥ್ಯ ದೊಂದಿಗೆ ತೆರೆಯಲು ಅವಕಾಶವಿದೆ.

ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿ ಹಾಗೂ ಅಟೋರಿಕ್ಷಾಗಳು ಸಂಚರಿಸಬಹುದು. ಪ್ರೇಕ್ಷಕರಿಗೆ ಅವಕಾಶ ನೀಡದೇ, ಹೊರಾಂಗಣ ಕ್ರೀಡೆಗಳಿಗೆ ಅನುಮತಿ ಇದೆ. ಸರಕಾರಿ ಹಾಗೂ ಖಾಸಗಿ ಕಚೇರಿಗಳು ಶೇ.50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು.

ಹಿಂದಿನಂತೆ ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ 40 ಜನರೊಂದಿಗೆ ನಡೆಸಲು ಅನುಮತಿ ಇದೆ. ಶವ ಸಂಸ್ಕಾರವನ್ನು ಗರಿಷ್ಠ ಐದು ಜನರೊಂದಿಗೆ ನಿರ್ವಹಿಸಬಹುದು.

Leave A Reply

Your email address will not be published.