ಬಂಟ್ವಾಳ : ಕಟ್ಟತ್ತಿಲ ಹಿಂದು ರುದ್ರ ಭೂಮಿ ಸಮೀಪ ನೀರಿನ ಟ್ಯಾಂಕ್ ನಿರ್ಮಾಣ | ಸಾರ್ವಜನಿಕರಿಂದ ಆಕ್ಷೇಪ
ಬಂಟ್ವಾಳ ತಾಲೂಕಿನ ಕಟ್ಟತ್ತಿಲ ಪಾಲ್ತಾಜೆ ಎಂಬಲ್ಲಿಯ ಪ.ಜಾತಿ ಕಾಲೋನಿಯ ಸಮೀಪ ಅನಾದಿಕಾಲದಿಂದಲೂ ಕಾಲೋನಿಯ ಮೃತರ ಅಂತ್ಯಸಂಸ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದು ಇದೀಗ ಸಾಲೆತ್ತೂರು ಗ್ರಾಮ ಪಂಚಾಯತ್ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಹೊರಟಿರುವುದನ್ನು ಆಕ್ಷೇಪಿಸಿ ಸ್ಥಳೀಯ ಗ್ರಾಮಸ್ಥರ ಸಹಿಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಸೈನಾರ್ ರವರಿಗೆ ಮನವಿಯನ್ನು ಸಲ್ಲಿಸಿ ಟ್ಯಾಂಕ್ ನಿರ್ಮಾಣದ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಪ.ಜಾತಿ ಕಾಲೋನಿಯ ಸಮೀಪವಿರುವ ಹಿಂದು ರುದ್ರ ಭೂಮಿ ಹತ್ತಿರ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಕಾರ್ಯವನ್ನು ಕೂಡಲೇ ಕಾಮಗಾರಿಯನ್ನು ನಡೆಸದೆ ಬೇರೆ ಕಡೆಗೆ ಸ್ಥಳಾಂತರಗೊಳಿಸ ಬೇಕು. ಇಲ್ಲದಿದ್ದಲ್ಲಿ ಇದರಿಂದಾಗಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಬಾಂದವರಿಗೆ ಹಾಗು ಮಕ್ಕಳಿಗೆ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆಗಳಿದೆ ನಮ್ಮ ಮನವಿಯನ್ನು ಕಡೆಗಣಿಸಿ ನೀರಿನ ಟ್ಯಾಂಕ್ ಕಾಮಗಾರಿಯನ್ನು ಕೈಗೊಂಡರೆ ನಾವು ನಮ್ಮ ನಾಗರಿಕ ಸಮಾಜದ ಹಿತದೃಷ್ಟಿಗಾಗಿ ಪ್ರತಿಭಟನೆ ಹೋರಾಟವನ್ನು ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಂಘಟನ ಸಂಚಾಲಕ ನಾಗರಾಜ್ ಎಸ್ ಲೃಾಲ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಸೇವಾ ಸಮಿತಿ ಪಾಲ್ತಾಜೆ ಅಧ್ಯಕ್ಷರಾದ ಶೀದರ್,ಬೈರ ಸಮಾಜದ ಹಿರಿಯ ಮುಂಖಡರಾದ ಪೂವಾಣಿ ಪಾಲ್ತಾಜೆ,ಹೇಮಂತ್,ಸೂರಪ್ಪ,ಪ್ರೀಯಾಂಕ ನಾರಯಾಣ,ಲಕ್ಷ್ಮಿ,ಪವಿತ್ರ ವಿನೋದ್,ಅಮಿತ ಕೋಡಿ ಮನೆ,ಲಲಿತ ಕೋಡಿ ಮನೆ ಹಾಗು ಸ್ಥಳಿಯರು ಉಪಸ್ಥಿತರಿದ್ದರು.