ಭತ್ತ ಬೆಳೆಸಿ ನಾಡು ಕಟ್ಟೋಣ | ಸ್ವತಃ ಗದ್ದೆಗಿಳಿದು ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ವಿನೂತನ ಯೋಜನೆಯ ಅಂಗವಾಗಿ ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೇತೃತ್ವದಲ್ಲಿ ಹಡಿಲು ಗದ್ದೆಯನ್ನು ಬೇಸಾಯ ಮಾಡಬೇಕು ಎನ್ನುವ ಕೋರಿಕೆಯ ಮೇರೆಗೆ ಕುರಿಯ ಗ್ರಾಮದ ಮುಳಿಯ ಶ್ಯಾಮ ಭಟ್ ಅವರ ಕುಟುಂಬದ ಗದ್ದೆಯಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಕೃಷಿ ಆಂದೋಲನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷರಾದ ಶ್ರೀ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಶ್ರೀ ರಾಮದಾಸ್, ಶ್ರೀ ರಾಮಚಂದ್ರ ಕಾಮತ್, ಶ್ರೀ ರವೀಂದ್ರನಾಥ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಬೂಡಿಯಾರ್ ರಾಧಾಕೃಷ್ಣ ರೈ ಹಾಗೂ ಮುಳಿಯ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಂಜೀವ ಮಠಂದೂರು ಅವರು ಶಾಲಾ ಕಾಲೇಜು ದಿನಗಳಲ್ಲಿ ಸ್ವತಃ ಭತ್ತದ ಗದ್ದೆ ಉಳುತ್ತಿದ್ದ ಸಂಜೀವ ಮಠಂದೂರು ಅವರು ಕೃಷಿಯನ್ನು ಒಂದೇನೆ ನಂಬಿ ಈ ಮಟ್ಟಕ್ಕೆ ಬೆಳೆದವರು. ಭತ್ತದ ಗದ್ದೆಯ ಕೃಷಿಯಿಂದ ನಿಧಾನಕ್ಕೆ ಅಡಿಕೆ ಕೃಷಿಯತ್ತ ವಾಲಿದವರು. ತಮ್ಮ ಮನೆಯ ಪಕ್ಕದ ಗುಡ್ಡೆಯನ್ನು, ಇಷ್ಟಿಶ್ಟೆ ಅಗೆದು ಸಮ ಮಾಡಿ ಆನಂತರ ಕಾಲೇಜು ಹೋಗುತ್ತಿದ್ದವರು ಅವರು. ಗುಡ್ಡ ಅಗೆದು ಭತ್ತದ ಗದ್ದೆಯನ್ನು ನಿರ್ಮಿಸಿ ಭತ್ತ ಬೆಳೆದು ತೋರಿಸಿದವರು ಸಂಜೀವ ಮಠ0ದೂರು. ಏನೇ ಬೆಳೆದರು ಕೂಡಾ ತಿನ್ನಲು ಅನ್ನವೇ ಬೇಕು ಎಂಬುದನ್ನು ಮನಗಂಡು ಇದೀಗ ಭತ್ತದ ಬೆಳೆಗೆ ಪುತ್ತೂರು ತಾಲೂಕು ಇಳಿದಿದೆ.