ಚೆನ್ನೈ :ಜನಪ್ರಿಯ ಯೂಟ್ಯೂಬರ್, ಪಬ್ಜಿ ಗೇಮರ್ ಮದನ್ ಕುಮಾರ್ ಬಂಧನ

ಚೆನ್ನೈ :ಯೂಟ್ಯೂಬ್ ಚಾನೆಲ್ ನಲ್ಲಿ ಗೇಮಿಂಗ್ ವೀಡಿಯೋಗಳಿಗೆ ಗೇಮರ್ ಮದನ್ ಕುಮಾರ್ ಹಾಗೂ ಪತ್ನಿ ಅಶ್ಲೀಲ ಸಂಭಾಷಣೆ ನಡೆಸುವುದು ಕಂಡು ಬಂದಿದ್ದು,ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ.

ಮದನ್ ಕುಮಾರ್ ದಂಪತಿಗಳು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್‌ಗೆ ಸುಮಾರು ಎಂಟು ಲಕ್ಷ ಚಂದಾದಾರರು ಇದ್ದು, ಮದನ್, ಟಾಕ್ಸಿಕ್ ಮದನ್ 18+, ಪಬ್‌ಜಿ ಮದನ್ ಗರ್ಲ್ ಫ್ಯಾನ್, ರಿಚೀ ಗೇಮಿಂಗ್ ವೈಟಿ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದರು. ಅಲ್ಲಿ ಗೇಮಿಂಗ್ ವೀಡಿಯೊಗಳನ್ನು ಶೇರ್ ಮಾಡಿ ಅಶ್ಲೀಲ ಸಂಭಾಷಣೆ ಬಳಸಿಕೊಳ್ಳುತ್ತಿದ್ದರು.

ಮದನ್ ಕುಮಾರ್ ಲೈವ್-ಸ್ಟ್ರೀಮಿಂಗ್ ನಲ್ಲಿ PUBG ಗೇಮಿಂಗ್ ವೀಡಿಯೊ ಹರಿಯಬಿಟ್ಟು ಮಹಿಳೆಯರಿಗೆ ಅಶ್ಲೀಲ ಕಾಮೆಂಟ್ಸ್ ಮಾಡಿದ್ದು, ಕೆಲವು ದಿನಗಳ ಹಿಂದೆ ಈತನ ಪತ್ನಿ ಯೂಟ್ಯೂಬರ್ ಕೃತಿಕಾ ಅವರನ್ನು ಸೇಲಂನಲ್ಲಿ ಬಂಧಿಸಲಾಗಿತ್ತು. ಇದೀಗ ಖ್ಯಾತ ಯೂಟ್ಯೂಬರ್ ಮತ್ತು ಆಗಿರುವ ಪಬ್ ಜಿ ಗೇಮರ್ ಮದನ್ ಕುಮಾರ್ ಅವರನ್ನು ಧರ್ಮಪುರಿಯ ಮನೆಯೊಂದರಿಂದ ತಮಿಳುನಾಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Leave A Reply

Your email address will not be published.