ನೆಟ್ಟಣ | ಸಂತ ಮೇರಿ ಚರ್ಚ್ ವತಿಯಿಂದ ಆರೋಗ್ಯ ರಕ್ಷಾ ಪರಿಕರಗಳ ವಿತರಣೆ

ಬಿಳಿನೆಲೆ : ನೆಟ್ಟಣ ಸಂತ ಮೇರಿಸ್ ಚರ್ಚ್ ವತಿಯಿಂದ ಬಿಳಿನೆಲೆ ಗ್ರಾಮ ಪಂಚಾಯಿತಿಗೆ ಆರೋಗ್ಯ ರಕ್ಷಾ ಪರಿಕರಣಗಳನ್ನು ವಿತರಿಸಲಾಯಿತು.

 

ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೊರೋನ ವಾರಿಯರ್ಸ್ ಆಗಿ ಕೋವಿಡ್ 19 ಅನ್ನು ಗ್ರಾಮ ಮಟ್ಟದಲ್ಲಿ ಹತೋಟಿಗೆ ತರುವ ಕೆಲಸ ಮಾಡುತಿದ್ದಾರೆ. ಇದನ್ನು ಮನಗಂಡು ನೆಟ್ಟಣ ಸಂತ ಮೇರಿಸ್ ಚರ್ಚ್ ವತಿಯಿಂದ ಗ್ರಾಮ ಪಂಚಾಯಿತಿಗೆ ಮತ್ತು ಪಂಚಾಯಿತಿಗೆ ಬರುವ ಸಾರ್ವಜನಿಕರ ಅನುಕೂಲತೆಗಾಗಿ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಸಂತ ಮೇರಿಸ್ ಚರ್ಚ್, ನೆಟ್ಟಣ ಹಾಗೂ ಕೋವಿಡ್ ಕೇರ್ ತಂಡ ಮಾಡುವ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ಶಿವಶಂಕರ್ ಮಾತನಾಡಿ ನೆಟ್ಟಣ ಮತ್ತು ಬಿಳಿನೆಲೆಯಲ್ಲಿರುವ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ಟನ್ನು ವಿತರಿಸುವುದು ಹಾಗೂ ಕೋವಿಡ್ ಪಾಸಿಟಿವ್ ಆಗಿ ಕ್ವಾರಂಟೈನ್ ಇರುವ ಮನೆಯವರಿಗೆ ಪಲ್ಸ್ ಒಕ್ಸಿಮೀಟರ್ ಅನ್ನು ಒದಗಿಸುವ ತಂಡದ ಸಾಮಾಜಿಕ ಕಾಳಜಿಯನ್ನು ಶ್ಲಾಘಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶೀನಾ ಎ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೋವಿಡ್ ಕೇರ್ ತಂಡದ ಸದಸ್ಯರು ಸಹಕರಿಸಿದರು.

Leave A Reply

Your email address will not be published.