ಕಡಬದ ಮುಖ್ಯ ರಸ್ತೆ ಬದಿಯಲ್ಲೇ ಇದೆ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಗೆಲ್ಲುಗಳು..ಇನ್ನೂ ತೆರವುಗೊಳಿಸದೇ ನಿದ್ದೆಯಲ್ಲಿದ್ದಾರೆಯೇ ಮೆಸ್ಕಾಂ ಅಧಿಕಾರಿಗಳು

ಕಡಬ ಪೇಟೆಯ ಮುಖ್ಯ ರಸ್ತೆಯ ಫುಟ್ ಪಾತ್ ನಲ್ಲೇ ಇನ್ನೂ ತೆರವುಗೊಳಿಸದೇ ಉಳಿದಿದೆ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಗೆಲ್ಲುಗಳು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಗಳು ಹರಿದಾಡುತ್ತಿವೆ, ಆದರೂ ಅಧಿಕಾರಿಗಳ ಗಮನಕ್ಕೆ ಬರಲಿಲ್ಲ ಎಂಬುವುದೇ ವಿಪರ್ಯಾಸ.

 


ಮುಂಜಾನೆ ಹೊತ್ತಿಗೆ ಕಡಬ ಪೇಟೆಗೆ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯಲು ಹೆಚ್ಚು ವಾಹನಗಳು, ಜನರು ಬರುತ್ತಿರುವುದರಿಂದ ಈ ರೀತಿ ರಸ್ತೆ ಬದಿ ಮರದ ಗೆಲ್ಲುಗಳು ವಾಹನ ಸವಾರರಿಗೆ ಅಡಚಣೆಯುಂಟುಮಾಡುತ್ತಿದೆ.ಈ ಬಗ್ಗೆ ತಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ತೆರವುಗೊಳಿಸಬೇಕೆಂಬುವುದು ಜನರ ಆಗ್ರಹವಾಗಿದೆ.

Leave A Reply

Your email address will not be published.