ನೊಂದವರ ಪಾಲಿನ ಆಶಾ ಕಿರಣ ಡಾ. ಸೌಮ್ಯ ರವರಿಗೆ ಬೀಳ್ಕೊಡುಗೆ

ಸಮಾನ ಮನಸ್ಕರ ವೇದಿಕೆ, ನೆಲ್ಯಾಡಿ ವತಿಯಿಂದ ವೈದ್ಯಾಧಿಕಾರಿ ಡಾ. ಸೌಮ್ಯ ರವರಿಗೆ ಬೀಳ್ಕೊಡುಗೆ.

 

ನೆಲ್ಯಾಡಿ : ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಯಲ್ಲಿ ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ಡಾ. ಸೌಮ್ಯ ರವರನ್ನು ಸಮಾನ ಮನಸ್ಕರ ವೇದಿಕೆ ವತಿಯಿಂದ ಬೀಳ್ಕೊಡುಗೆ ನಡೆಸಲಾಯಿತ್ತು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಜನರಿಗೆ ಪ್ರೀತಿ ಪಾತ್ರರಾದರು. ಕೋವಿಡ್ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಸಹದ್ಯೋಗಿಗಳೊಂದಿಗೆ ಮಾಡಿದ ಸೇವೆಯೇ ಕೋವಿಡ್ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ಸಮಾನ ಮನಸ್ಕ ವೇದಿಕೆ ಅಧ್ಯಕ್ಷರು ಫಾ. ವರ್ಗಿಸ್ ಒ. ಐ. ಸಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಾ. ಆದರ್ಶ್ ಜೋಸೆಫ್ ನೊಂದವರ ಪಾಲಿನ ಸಾಂತ್ವನವೇ ಡಾ. ಸೌಮ್ಯ ಎಂದು ಹೇಳಿ ಅವರ ಮುಂದಿನ ಬಾಳಿಗೆ ಶುಭವನ್ನು ಕೋರಿದರು.

ಸಮಾನ ಮನಸ್ಕ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕೆ. ಪಿ ತೋಮಸ್ ಸ್ವಾಗತಿಸಿ ಶ್ರೀ ದಯಾನಂದ ಬಂಟ್ರಿಯಲ್ ವಂದಿಸಿದರು ಹಾಗೂ ಟಾಮ್ ಎಂ. ಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave A Reply

Your email address will not be published.