ಕೊರೋನಾ ಕಾರಣದಿಂದ ಖಾಸಗಿ ಶಾಲೆಗಳಿಂದ ವರ್ಗಾವಣೆ ಪಡೆದು ಸರ್ಕಾರಿ ಶಾಲೆಗಳತ್ತ ಕಾಲಿಡುತ್ತಿದ್ದಾರೆ ವಿದ್ಯಾರ್ಥಿಗಳು
ಕೊರೋನಾ ಎರಡನೇ ಅಲೆ ಶೈಕ್ಷಣಿಕ ರಂಗದ ಮೇಲೆ ತೀವ್ರ ಪರಿಣಾಮ ಬೀರಿದೆ. ಹೆಚ್ಚು ಕಡಿಮೆ ಕಳೆದ ಒಂದೂವರೆ ವರ್ಷದಿಂದ ದೇಶಾದ್ಯಂತ ನೇರ ಶಿಕ್ಷಣ ವ್ಯವಸ್ಥೆ ಸ್ಥಗಿತಗೊಂಡಿದೆ. ಆನ್ ಲೈನ್ ಶಿಕ್ಷಣ ವ್ಯವಸ್ಥೆ ಪರಿಚಯಿಸಲಾಗಿದೆ.
ಇದರ ಜತೆಗೆ ಪೋಷಕರ ಆದಾಯ ಕೊರತೆ ಮಕ್ಕಳ ಶಿಕ್ಷಣ ಸ್ವರೂಪದ ಮೇಲೆ ಪರಿಣಾಮ ಬೀರಿದೆ. ದುಬಾರಿ ಶುಲ್ಕ ಕಟ್ಟಲು ವಿಫಲಪಾಗಿರುವ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಸೇರಿಸುತ್ತಿದ್ದಾರೆ.
ಮಕ್ಕಳ ವರ್ಗಾವಣೆ ಪತ್ರ ಪಡೆದುಕೊಂಡು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನೀಡುತ್ತಿರುವ ಮಧ್ಯಾಹ್ನದ ಊಟ, ಹಾಗೂ ಇನ್ನಿತರ ಪ್ರೋತ್ಸಾಹ ಕ್ರಮಗಳು ಮಕ್ಕಳ ಸೇರ್ಪಡೆ ಹೆಚ್ಚಿಸಲು ಕಾರಣವಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಇದು ಕೇವಲ ಕೆಲವು ರಾಜ್ಯಗಳ ಕಥೆಯಲ್ಲ. ದೇಶದ ಎಲ್ಲೆಡೆ ಇದು ಈಗ ಸಾಮಾನ್ಯವಾಗಿದೆ. ಕೊರೋನಾ ಕಾರಣದಿಂದ ತುಂಬಾ ಪೋಷಕರು ಸರ್ಕಾರಿ ಶಾಲೆಗಳತ್ತ ಕಾಲಿಡುತ್ತಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ತುಂಬಾ ಮಕ್ಕಳ ದಾಖಲಾತಿ ಆಗುತ್ತಿದೆ.