ಉಪ್ಪಿನಂಗಡಿ : ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿದ ಮರ | ಪ್ರಯಾಣಿಕರಿಗೆ ಗಾಯ

ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಮರವೊಂದು ಉರುಳಿಬಿದ್ದ ಘಟನೆ ಜೂ.17 ರಂದು ವರದಿಯಾಗಿದೆ.

 

ಕರಾಯ-ಉಪ್ಪಿನಂಗಡಿ ಸಂಪರ್ಕ ರಸ್ತೆ ಕರಾಯದ ಬಳಿ ಗಾಳಿಯ ರಭಸಕ್ಕೆ ಮರವೊಂದು ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಉರುಳಿಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ.

ಅಟೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ

Leave A Reply

Your email address will not be published.