ತೊಡಿಕಾನ | ನೇಣು ಬಿಗಿದು ಅವಿವಾಹಿತ ಯುವಕ ಆತ್ಮಹತ್ಯೆ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗುರುವಾರ ವರದಿಯಾಗಿದೆ.

 

ದೇವರಗುಂಡಿ ನಿವಾಸಿ ಕೇಪಣ್ಣ ನಾಯ್ಕ ಎಂಬವರ ಪುತ್ರ ಜಯರಾಮ (34 ವ.) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ಜಯರಾಮ ಅವರು ತನ್ನ ಮನೆ ಸಮೀಪದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಅವರಿಗೆ 34ವರ್ಷ ವಯಸ್ಸಾಗಿತ್ತು.
ಮೃತರು ಅವಿವಾಹಿತರಾಗಿದ್ದು,
ತಾಯಿ ಚಿನ್ನಮ್ಮ ಸಹೋದರಿ ಇಂದಿರಾ, ವನಿತಾ, ಸುಶೀಲ ರುಕ್ಮಿಣಿ, ಬಂಧುಗಳನ್ನು ಅಗಲಿದ್ದಾರೆ.

Leave A Reply

Your email address will not be published.