ನೆಟ್ಟಣ : ಆಟೋ ರಿಕ್ಷಾ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರಗಳ ವಿತರಣೆ

ನೆಟ್ಟಣ ಸಂತ ಮೇರಿಸ್ ಚರ್ಚ್ ವತಿಯಿಂದ, ಕೋವಿಡ್ ಕೇರ್ ತಂಡದ ನೇತೃತ್ವದಲ್ಲಿ ನೆಟ್ಟಣ ಮತ್ತು ಬಿಳಿನೆಲೆ ಆಟೋ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರಗಳನ್ನು ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿ ಧರ್ಮಗುರು ಫಾ. ಆದರ್ಶ್ ಜೋಸೆಫ್ ಆಟೋ ರಿಕ್ಷಾ ಚಾಲಕರು ಯಾವುದೇ ತುರ್ತು ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ದುಡಿಯುವವರಾಗಿದ್ದು, ಕೋವಿಡ್ ವಾರಿಯರ್ಸ್ ಆಗಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಚಾಲಕರಿಂದ ಆಗಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ಶಿವ ಶಂಕರ್ ಮಾತಾಡಿ ಆಟೋ ಚಾಲಕರು ನೀಡುವ ಸೇವೆಯನ್ನು ಶ್ಲಾಘಸಿದರು. ಅದೂ ಅಲ್ಲದೆ ಎಲ್ಲರೂ ಜಾಗೃತರಾಗಿ ನಮ್ಮ ಗ್ರಾಮವನ್ನು ಆದಷ್ಟು ಬೇಗ ಕೊರೋನ ಮುಕ್ತವಾಗಿಸಬೇಕೆಂದು ಕರೆ ನೀಡಿದರು. ಶ್ರೀ ಪ್ರಸಾದ್ ನೆಟ್ಟಣ, ಹಾಗೂ ಶ್ರೀ ರವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋವಿಡ್ ಕೇರ್ ತಂಡದ ಸದಸ್ಯರು ಸಹಕರಿಸಿದರು. ಶ್ರೀ ವಿಜೇಶ್ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.