ಹಣ್ಣು ತರಕಾರಿ ಜತೆ ಗೋಮಾಂಸ ಮಾರೋರಿದ್ದಾರೆ ಎಚ್ಚರಿಕೆ | ಹಣ್ಣಿನ ಜತೆ 500 ಕೆಜಿ ಗೋ ಮಾಂಸ ಸಾಗಾಟ

ಕಾರವಾರ: ಹಣ್ಣಿನ ವಾಹನದಲ್ಲಿ ಗೋ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಶಿರಾಲಿ ಚೆಕ್ ಪೋಸ್ಟ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

 

ಅಲ್ಲದೆ ಗೂಡ್ಸ್ ವಾಹನ ಸಹಿತ ಮೂವರನ್ನು ಬಂಧಿಸಿದ್ದಾರೆ. ಮೌಲಾ ಅಲಿ ಬಾಷಾ ಸಾಬ್ ತೋಟದ್ ಹಾನಗಲ್, ಜೀಲಾನಿ ಗೌಸ್ ಮೊಹಿದ್ದೀನ್ ಹಾಗೂ ಭಟ್ಕಳದ ಮುಝಾಫರ್ ಬಂಧಿತರು.

ಹೊನ್ನಾವರದಿಂದ ಭಟ್ಕಳದ ಕಡೆಗೆ ಕಲ್ಲಂಗಡಿ ಹಣ್ಣುಗಳೂ ಸೇರಿದಂತೆ ಇತರೇ ಹಣ್ಣುಗಳನ್ನು ತುಂಬಿಕೊಂಡು ಅದರ ಅಡಿಯಲ್ಲಿ ಸುಮಾರು 500 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು, ವಾಹನವು ಶಿರಾಲಿ ಚೆಕ್ ಪೋಸ್ಟ್ ಹತ್ತಿರ ತಲುಪುತ್ತಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ತುಂಬಿದ್ದ ಹಣ್ಣುಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಗೋವಿನ ಮಾಂಸ ಪತ್ತೆಯಾಗಿದೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ್ಣು ತರಕಾರಿಯ ಜೊತೆಗೆ ಗೋ ಮಾಂಸ ಇಟ್ಟು ಮಾರುವಂತಾಗಿದೆ. ಇನ್ನು ಇಂಥವರ ಕೈಲಿ ಹೇಗೆ ಹಣ್ಣು ತರಕಾರಿ ಕೊಳ್ಳುವುದು?? ಎನ್ನುವುದು ಜನರ ಪ್ರಶ್ನೆಯಾಗಿದೆ.

Leave A Reply

Your email address will not be published.