ಕಲ್ಮಡ್ಕ ಗ್ರಾ.ಪಂ ಗ್ರಾಮ ವಿಕಾಸ ಯೋಜನೆಯ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣದಲ್ಲಿ ನಡೆದಿದೆಯಾ ಅವ್ಯವಹಾರ ?
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯ ಮೈದಾನಕ್ಕೆ 2015-16 ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣಕ್ಕೆಂದು 9 ಲಕ್ಷ ಹಣ ಮಂಜೂರು ಮಾಡಲಾಗಿತ್ತು, ಆ ಸಂದರ್ಭದಲ್ಲಿ ಗ್ರಾಮಸ್ತರಿಗೆ ಸರ್ಕಾರದಿಂದ ಹಣ ಮಂಜೂರು ಗೊಳಿಸಲಾಗಿದೆ ಎಂಬ ಮಾಹಿತಿ ತಿಳಿದಿರಲಿಲ್ಲ, ಹಾಗಾಗಿ ಇಲ್ಲಿನ ಗ್ರಾಮಸ್ತರು ಸೇರಿ ಶ್ರಮದಾನ ನಡೆಸುವ ಮೂಲಕ ಮೈದಾನವನ್ನು ಸ್ವಲ್ಪ ಅಗಳಗೊಳಿಸಿದ್ಧರು.
ಆದರೆ ಕೆಲವು ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಎಡಕ್ಕಾನ ರಾಜಾರಾಂ ಭಟ್ ಎಂಬವರು ಅಲ್ಲಿಗೆ ತೆರಳಿ ಈ ಮೈದಾನದ ಹೆಸರಿನಲ್ಲಿ 9 ಲಕ್ಷ ರುಪಾಯಿ ಅಕ್ರಮ ನಡೆದಿದೆಯೆಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು ಈ ಮೂಲಕ ಭ್ರಷ್ಟಾಚಾರ ಹೊರಬಿದ್ದಿದೆ.
ಸರಕಾರಿ ಕಡತಗಳಲ್ಲಿ ಕಾಮಗಾರಿ ನಡೆದಿದೆ. ಎಂ.ಬಿ ಪುಸ್ತಕದಲ್ಲೂ ದಾಖಲಾಗಿದೆ. ಬಿಲ್ ಪಾವತಿಯೂ ಆಗಿದೆ. ಆದರೆ ಅಲ್ಲಿ ಕಾಮಗಾರಿಯೇ ನಡೆದಿಲ್ಲ.ಆದರೆ ಇದಕ್ಕೆ ಸಾಕ್ಷಿಯೆಂಬಂತೆ ಅಮೃತ ಶಿಲೆಯ ಫಲಕ ಸತ್ಯ ಹೇಳುತ್ತಿದೆ.
ಸಾಮಾಜಿಕ ಕಾರ್ಯಕರ್ತ ಎಡಕ್ಕಾನ ರಾಜಾರಾಂ ಭಟ್ ಎಂಬವರು ಈ ಬಗ್ಗೆ ವಿಡಿಯೋ ವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಸುದ್ದಿ ಮಾಡುತ್ತಿದೆ. ಈ ಕುರಿತಂತೆ ಅವರು ಸಂಬಂಧ ಪಟ್ಟ ಇಲಾಖೆಗೂ ದೂರು ನೀಡಿದ್ದಾರೆ.
ಕಾಮಗಾರಿ ನಡೆದ ಸ್ಥಳದಲ್ಲಿ ಬರೀ ಮೈದಾನವಷ್ಟೇ ಇದೆ. ಯಾವುದೇ ಗ್ಯಾಲರಿ ನಿರ್ಮಾಣವಾಗಿಲ್ಲ. ಕಾಮಗಾರಿ ನಡೆಯದೇ 9 ಲಕ್ಷ ಅವ್ಯವಹಾರ ನಡೆದಿರುದಾಗಿ ಸಾಮಾಜಿಕ ಕಾರ್ಯಕರ್ತ ರಾಜಾರಾಂ ಆರೋಪಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ
ಎಸ್.ಡಿ.ಪಿ.ಐ ಒತ್ತಾಯ
ಈ ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಎಸ್ಡಿಪಿಐ ಕಲ್ಮಡ್ಕ ಗ್ರಾಮ ಸಮಿತಿ ಆಗ್ರಹಿಸಿದೆ.ಅಲ್ಲದೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ