ಕುಂಬ್ರ ಶಾಲೆಯ ಕ್ರೀಡಾಂಗಣದಲ್ಲಿ ಭತ್ತ ಬೆಳೆಯಲು ಸಿದ್ದ | ಪುತ್ತೂರು ಶಾಸಕರಿಂದ ಗದ್ದೆಗೆ ಇಳಿಯೋಣ ಬನ್ನಿ’ ಆಂದೋಲನಕ್ಕೆ ಚಾಲನೆ

ಪುತ್ತೂರು ತಾಲೂಕಿನಲ್ಲಿ ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯಾದ “ಗದ್ದೆಗೆ ಇಳಿಯೋಣ ಬನ್ನಿ” ಆಂದೋಲನಕ್ಕೆ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಕುಂಬ್ರ ಕೆ.ಪಿ.ಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಚಾಲನೆ ನೀಡಿದರು.

ಈ ಶಾಲೆಯ ಸುಮಾರು ಎರಡು ಎಕ್ರೆ ವಿಸ್ತೀರ್ಣದ ಆಟದ ಮೈದಾನವನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ವಿಶಾಲವಾದ ಆಟದ ಮೈದಾನ ಮಳೆಗಾಲದಲ್ಲಿ ಕ್ರೀಡೆಗೆ ಬಳಸದೇ ಇರುವ ಕಾರಣ ಈ ಬಾರಿ ಮೈದಾನದಲ್ಲಿ ಭತ್ತ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂಬ್ರ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಕುಂಬ್ರ ಕೆ.ಪಿ.ಎಸ್ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ವಕೀಲ ದುರ್ಗಾ ಪ್ರಸಾದ್ ರೈ ಕುಂಬ್ರ, ಅರಿಯಡ್ಕ ಅಬ್ದುಲ್ ರಹಮಾನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.